March 9, 2026
Monday, March 9, 2026
spot_img

Viral | ಕೊಚ್ ಗೆ ಹೊಸ ಗರ್ಲ್ ಫ್ರೆಂಡ್ ಪರಿಚಯಿಸಿದ ಪಾಂಡ್ಯ: ಗಂಭೀರ್‌ ರಿಯಾಕ್ಷನ್ ಹೇಗಿತ್ತು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಫೈನಲ್ ಪಂದ್ಯದ ಉತ್ಸಾಹದ ನಡುವೆ ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಹಾರ್ದಿಕ್ ತಮ್ಮ ಸ್ನೇಹಿತೆ ಮಾಹಿಕಾ ಶರ್ಮಾ ಅವರನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಪರಿಚಯಿಸುತ್ತಿರುವುದು ಕಾಣಿಸಿದೆ.

ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಭಾರತ ತಂಡ ಮಾರ್ಚ್ 6ರಂದು ಅಹಮದಾಬಾದ್‌ಗೆ ಆಗಮಿಸಿತ್ತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಆಟಗಾರರು ತಂಡದೊಂದಿಗೆ ಹೋಟೆಲ್‌ಗೆ ತೆರಳುತ್ತಿದ್ದಾಗ ಈ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗಂಭೀರ್ ಕೂಡ ಸ್ನೇಹಪೂರ್ಣವಾಗಿ ಮುಗುಳ್ನಗೆ ನೀಡಿ ಮಾತುಕತೆ ನಡೆಸಿದ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ:

ಈ ನಡುವೆ ಟೂರ್ನಿಯ ಹಲವು ಪಂದ್ಯಗಳಲ್ಲಿ ಮಾಹಿಕಾ ಶರ್ಮಾ ಹಾರ್ದಿಕ್‌ಗೆ ಬೆಂಬಲ ನೀಡಲು ಮೈದಾನದಲ್ಲೇ ಕಾಣಿಸಿಕೊಂಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಅವರು ಸ್ಟ್ಯಾಂಡ್ಸ್‌ನಲ್ಲಿ ಕುಳಿತು ಹಾರ್ದಿಕ್‌ಗೆ ಚಿಯರ್ ಮಾಡುತ್ತಿರುವುದು ಗಮನ ಸೆಳೆದಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !