September 25, 2026
Friday, September 25, 2026
spot_img

Viral | ಭಿಕ್ಷುಕ ಅಂತ Neglect ಮಾಡಿದ ಡೆಲಿವರಿ ಬಾಯ್ ಗೆ ಶಾಕ್: ಫುಡ್ ಆರ್ಡರ್ ಮಾಡಿ 50 ರೂ. ಟಿಪ್ ಕೊಟ್ಟ ವ್ಯಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಾರ್ವಜನಿಕರ ಗಮನ ಸೆಳೆದಿದೆ. ರಸ್ತೆಬದಿಯಲ್ಲಿ ಕಂಬಳಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ‘ಭಿಕ್ಷುಕ’ ಎಂದು ಭಾವಿಸಿದ ಡೆಲಿವರಿ ಏಜೆಂಟ್, ನಂತರ ಅದೇ ವ್ಯಕ್ತಿ ಆನ್‌ಲೈನ್‌ನಲ್ಲಿ ಆಹಾರ ಆರ್ಡರ್ ಮಾಡಿ 50 ರೂ. ಟಿಪ್ ನೀಡಿದ್ದನ್ನು ಕಂಡು ಅಚ್ಚರಿಗೊಂಡಿದ್ದಾನೆ.

ಇನ್‌ಸ್ಟಾಗ್ರಾಮ್‌ನಲ್ಲಿ ಫರ್ದೀನ್ ಖಾನ್ ಎಂಬ ಬಳಕೆದಾರರು ಈ ವೀಡಿಯೋ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ ಡೆಲಿವರಿ ಏಜೆಂಟ್ ಗ್ರಾಹಕರ ವಿಳಾಸ ಖಚಿತಪಡಿಸಿಕೊಳ್ಳಲು ಕರೆ ಮಾಡುತ್ತಾನೆ. ಕೆಲವೇ ಕ್ಷಣಗಳಲ್ಲಿ ರಸ್ತೆಬದಿಯಲ್ಲಿ ಮಲಗಿದ್ದ ವ್ಯಕ್ತಿಯೇ ಆಹಾರ ಆರ್ಡರ್ ಮಾಡಿದವರು ಎಂದು ತಿಳಿದುಬರುತ್ತದೆ. “ನಾನು ಆಹಾರ ಆರ್ಡರ್ ಮಾಡಬಾರದೇ?” ಎಂದು ಆ ವ್ಯಕ್ತಿ ಶಾಂತವಾಗಿ ಪ್ರಶ್ನಿಸುವುದು ವೀಡಿಯೋದಲ್ಲಿದೆ. ಬಳಿಕ 50 ರೂ. ಟಿಪ್ ನೀಡಿದಾಗ ಏಜೆಂಟ್ ಇನ್ನಷ್ಟು ದಿಗ್ಭ್ರಮೆಗೊಳ್ಳುತ್ತಾನೆ.

ಇದನ್ನೂ ಓದಿ:

ಈ ವೀಡಿಯೋಗೆ ಒಂದು ಮಿಲಿಯನ್‌ಗಿಂತ ಹೆಚ್ಚು ವೀಕ್ಷಣೆಗಳು ಲಭ್ಯವಾಗಿದ್ದು, ಸಾವಿರಾರು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ. ವಿಡಿಯೋ ಹಂಚಿಕೊಂಡ ವ್ಯಕ್ತಿ ಇದೇ ರೀತಿಯ ಅನುಭವಗಳನ್ನು ನಿಯಮಿತವಾಗಿ ಪೋಸ್ಟ್ ಮಾಡುತ್ತಿರುವುದರಿಂದ, ಅದರ ಸತ್ಯಾಸತ್ಯತೆ ಕುರಿತು ಚರ್ಚೆ ಮುಂದುವರಿದಿದೆ.

Must Read