ಟ್ವಿಟ್ಟರಿನಲ್ಲಿ ಇಲಾನ್ ಮಸ್ಕ್ ಆರಂಭಿಸಿರೋ ವಜಾ ಪರ್ವ- ತಮಾಷೆ ವಿಡಿಯೊ ಹಂಚುತ್ತಿದ್ದಾರೆ ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಂದುಕೊಂಡತೆ ಟೆಸ್ಲಾ ಸಿಇಒ ಇಲಾನ್‌ ಮಸ್ಕ್‌ ಟ್ವಿಟರ್‌ ಅನ್ನು ಅಧಿಕೃತವಾಗಿ ಖರೀದಿಸಿ, ಟ್ವಿಟ್ಟರ್‌ನಲ್ಲಿ ತಾಉ ಮುಖ್ಯಸ್ಥ ಎಂಬುದನ್ನು ಸಹ ಬರೆದುಕೊಂಡಿದ್ದಾರೆ. ಟ್ವಿಟರ್‌ ಖರೀದಿಸಿದ್ದೇ ತಡ, ಅಲ್ಲಿದ್ದ ಅಧಿಕಾರಿಗಳನ್ನು ಒಬ್ಬೊಬ್ಬರನ್ನೇ ಕಿತ್ತೊಗೆಯುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.

ಇಂಟರ್ನೆಟ್ ಬಳಕೆದಾರರು ಮಸ್ಕ್‌ ವಜಾ ಪರ್ವದ ಬಗ್ಗೆ ತಮಾಷೆಯ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ. ನೋಡಿ ನಗಬೇಕೋ, ಅಥವಾ ಟ್ವಿಟ್ಟರ್ ಅನ್ನು ಟ್ರೋಲ್ ಮಾಡಬೇಕೋ ಗೊತ್ತಿಲ್ಲ ಎಂಬಂತಿದೆ ಅವರ ಅರ್ಥ. ಗನ್‌ ಹಿಡಿದು ಕಚೇರಿಗೆ ಬಂದ ಮಸ್ಕ್‌ ಅದರಿಂದ ಬಣ್ಣವನ್ನು ಎರಚುತ್ತಾ ಎಲ್ಲರನ್ನು ಕಚೇರಿಯಿಂದ ಹೊರಹಾಕುವ ವಿಡಿಯೋವೊಂದು ಹರಿದಾಡುತ್ತಿದೆ. ಮಸ್ಕ್‌ ಟ್ವಿಟರ್‌ ಕಚೇರಿಗೆ ಬರುತ್ತಿದ್ದಂತೆ ನಡೆಯುತ್ತಿರುವ ದೃಶ್ಯ ಎಂಬ ಕಾಮೆಂಟ್‌ಗಳು ಹರಿದಾಡುತ್ತಿದೆ. ಮೊನ್ನೆಯಷ್ಟೇ ಸಿಂಕ್‌ ಹಿಡಿದ ವಿಡಿಯೋ ವೈರಲ್‌ ಆಗಿತ್ತು. ಏನದರೂ ಸಾಮಾಜಿಕ ಜಾಲತಾಗಳಲ್ಲಿ ಮಸ್ಕ್‌ ವಿರುದ್ಧ ಫನ್ನಿ ಮೀಮ್ಸ್ ಮಾತ್ರ ನಿಲ್ಲುತ್ತಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!