ಬೇಟೆಗೆ ಬಂದ ಹದ್ದು ಮೇಲೆ ಆಕ್ಟೋಪಸ್‌ ಡೆಡ್ಲಿ ಅಟ್ಯಾಕ್; ಮುಂದೇನಾಯ್ತು ಗೊತ್ತಾ..? ವೈರಲ್‌ ವಿಡಿಯೋ

ಹೊಸದಿಗಂತ ಡಿಜಿಟಲ್ ಡೆಸ್ಕ್
ಬೇಟೆಗಾರ ಜೀವಿಗಳಲ್ಲಿ ಹದ್ದುಗಳಿಗೆ ಬಹಳಷ್ಟು ಪ್ರಖ್ಯಾತಿ. ಅವೆಷ್ಟು ನುರಿತ ಬೇಟೆಗಾರರೆಂದರೆ, ಒಮ್ಮೆ ಗುರಿಯನ್ನು ನಿರ್ಧರಿಸಿ ಚಂಗನೆ ಹಾರಿ ಬಂದು ತಾನು ನಿರ್ಧರಿಸಿದ ಪ್ರಾಣಿಯನ್ನು ಹಿಡಿದು ಹೊತ್ತೊಯ್ಯುವುದರಲ್ಲಿ ಹದ್ದುಗಳಿಗೆ ಹದ್ದುಗಳೇ ಸಾಟಿ.
ಆದರೆ ಕೆನಡಾದ ವ್ಯಾಂಕೋವರ್‌ನಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಇಲ್ಲೊಂದು ಹದ್ದು‌ ದೊಡ್ಡ ಅಕ್ಟೋಪಸ್‌ ಒಂದು ನೀರಿನ ಮೇಲ್ಭಾಗಕ್ಕೆ ಬಂದಿರುವುದನ್ನು ಗುರುತಿಸಿದೆ. ಇನ್ನೇನು.. ಅದನ್ನು ಬೇಟೆಯಾಡಿ ತಿನ್ನುವ ಭರದಲ್ಲಿ ಈ ಹದ್ದು ವೇಗವಾಗಿ ಅದರತ್ತ ಧಾವಿಸಿ ಬಂದಿದೆ. ಆದರೆ ಅದಕ್ಕೇನು ಗ್ರಹಚಾರ ಕೆಟ್ಟಿತ್ತೋ ಏನೋ..! ಬೇಟೆಯ ಧಾವಂತದಲ್ಲಿದ್ದ ಹದ್ದು ಚೂರೇ ಚೂರು ಎಚ್ಚರ ತಪ್ಪಿದೆ. ಇದನ್ನು ಚಾಣಾಕ್ಷತನದಿಂದ ಬಳಸಿಕೊಂಡ ಅಕ್ಟೋಪಸ್ ಬೇಟೆಗಾರನನ್ನೇ ಬೇಟೆಯಾಡಿದೆ…!
ಕ್ಷಣಾರ್ಧದಲ್ಲಿ ಅಕ್ಟೋಪಸ್‌ ನ ಸಾವಿನ ಬಾಹುಗಳು ಹದ್ದನ್ನು ಬಿಗಿಯಾಗಿ ಬಂಧಿಸಿಬಿಟ್ಟಿವೆ. ಕಕ್ಕಾಬಿಕ್ಕಿಯಾದ ಹದ್ದು ತನ್ನನ್ನು ಬಿಡಿಸಿಕೊಳ್ಳಲು ಹೆಣಗಾಡಿದೆ. ಅದೇ ಮಾರ್ಗವಾಗಿ ಮನೆಗೆ ಸಾಗುತ್ತಿದ್ದ ಮೀನುಗಾರರು ಹದ್ದಿನ ಅರಚಾಟ ಕೇಳಿ ಅಲ್ಲಿಗೆ ಬಂದಾಗ ಹದ್ದು ದೊಡ್ಡ ಅಕ್ಟೋಪಸ್‌ ವಿರುದ್ಧ ಹೋರಾಡುತ್ತಿರುವುದನ್ನು ಕಂಡಿದೆ.
ಆರಂಭದಲ್ಲಿ ಮೀನುಗಾರರು ಅವೆರಡರ ಹೋರಾಟದಲ್ಲಿ ಮಧ್ಯಪ್ರವೇಶಿಸಲು ಹೆದರಿದ್ದಾರೆ. ಆದರೆ ಆದರೆ ಅಂತಿಮವಾಗಿ ಏನಾದರಾಗಲಿ ಎಂದು ಹದ್ದಿನ ಸಹಾಯಕ್ಕೆ ಧಾವಿಸಿದ್ದಾರೆ. ತಮ್ಮ ಬಳಿ ಇದ್ದ ಕೊಕ್ಕೆ ಕೋಲಿನ ಸಹಾಯದಿಂದ ಎರಡೂ ಪ್ರಾಣಿಗಳನ್ನು ತಮ್ಮ ದೋಣಿಯ ಕಡೆಗೆ ಎಳೆದುಕೊಂಡು ಅಕ್ಟೋಪಸ್‌ ನ ಬಿಗಿಯಾದ ಹಿಡಿತದಿಂದ ಹದ್ದನ್ನು ಬಿಡುಗಡೆ ಮಾಡಿದ್ದಾರೆ. ತಪ್ಪಿಸಿಕೊಳ್ಳುತ್ತಿದ್ದಂತೆ ಹದ್ದು ಬದುಕಿದೆಯಾ ಬಡಜೀವವೇ ಎಂಬಂತೆ ಹದ್ದು ಮರದ ಬುಡವೊಂದರತ್ತ ಹಾರಿಹೋಗಿ ಸುಧಾರಿಸಿಕೊಳ್ಳುವುದನ್ನು ನೋಡಿದರೆ ಪಾಪ ಎನಿಸುತ್ತದೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಇದು ಇತ್ತೀಚಿನ ದೃಶ್ಯವಲ್ಲ. 2019ರ ಈ ಹಳೆಯ ವಿಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ರೆಡ್ಡಿಟ್‌ನಲ್ಲಿ ಮತ್ತೆ ಹಂಚಿಕೊಂಡ ವಿಡಿಯೋ ಕ್ಲಿಪ್ 45,000 ಕ್ಕಿಂತ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದವರು ಮೀನುಗಾರರ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!