ರಾಜಕಾರಣಿಗಳಿಗೆ ಚಪ್ಪಲಿಯಿಂದ ಹೊಡೆಯುವ ಯಂತ್ರ ಸಂಶೋಧಿಸಿದ ಪಾಕ್‌ ಜನ..! ವೈರಲ್‌ ವಿಡಿಯೋ..

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪಾಕಿಸ್ತಾನ ದಿವಾಳಿ ಅಂಚಿಗೆ ಸಾಗುತ್ತಿದೆ. ಹಣದುಬ್ಬರ ಹೆಚ್ಚಾಗಿದೆ. ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಜನರಿಗೆ ಕುಡಿಯಲು ಟೀ ಸಹ ಸಿಗದಿರುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಲ್ಲಿನ ಜನರು ಈ ಕಾರಣಕ್ಕಾಗಿ ಪ್ರಧಾನಿ ಶಹಬಾಜ್ ಷರೀಫ್ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಬೇಸತ್ತಿದ್ದಾರೆ. ಲಜ್ಜೆಗೆಟ್ಟ ಪಾಕ್‌ ರಾಜಕಾರಣಿಗಳ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪದೇಪದೆ ಹೀಗೆ ಹೊಡೆಯುವುದರಿಂದ ಸುಮ್ಮನೆ ತಮ್ಮ ಎನರ್ಜಿ ವೇಸ್ಟ್‌ ಎಂದು ಯೋಚಿಸಿರುವ ಪಾಕಿಸ್ತಾನದ ಜನರು ಇದಕ್ಕಾಗಿ ವಿನೂತನ ಮಾದರಿಯ ‘ಸ್ವಯಂಚಾಲಿತ ಯಂತ್ರ’ ವನ್ನು ತಯಾರಿಸಿದ್ದಾರೆ. ಆ ಯಂತ್ರದ ಕಾರ್ಯವೈಖರಿಯನ್ನು ನೋಡಿದರೆ ನೀವೂ ಸಹ ವಾವ್ ಎಂದು ಹೇಳುವಿರಿ!
ಪ್ರತಿಭಟನಾ ಸ್ಥಳವೊಂದರಲ್ಲಿ ಹಾಕಲಾದ ಹೋರ್ಡಿಂಗ್‌ನಲ್ಲಿ ಮೂವರು ಪಾಕಿಸ್ತಾನಿ ನಾಯಕರ ಫೋಟೋಗಳಿವೆ. ಅದರ ಕೆಳಗೆ ಈ ʼಯಂತ್ರʼವನ್ನು ಅಳವಡಿಸಲಾಗಿದೆ. ಈ ಯಂತ್ರಕ್ಕೆ ಚಪ್ಪಲಿಗಳನ್ನು ಜೋಡಿಸಲಾಗಿದೆ. ಪ್ರತಿಭಟನಾಕಾರರು ಒಂದು ಕಡೆಯಿಂದ ಹಗ್ಗವನ್ನು ಎಳೆಯುತ್ತಿದ್ದಂತೆ, ಮೂರು ಚಪ್ಪಲಿಗಳು ಏಕಕಾಲದಲ್ಲಿ ಮೂವರು ರಾಜಕೀಯ ನಾಯಕರ ಮುಖಕ್ಕೆ ಬಾರಿಸುತ್ತವೆ!. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಮೇಜರ್ ಗೌರವ್ ಆರ್ಯ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “ಪಾಕಿಸ್ತಾನದಲ್ಲಿ ಸ್ಟಾರ್ಟಪ್ ಪರಿಸರ ವ್ಯವಸ್ಥೆಯು ನಿಜವಾಗಿಯೂ ಪ್ರಬುದ್ಧವಾಗಿದೆ. ಈ ಸ್ವಯಂಚಾಲಿತ ಲ್ಯಾನಾಟ್ ಯಂತ್ರವು ಹೊಸ ಆವಿಷ್ಕಾರವಾಗಿದೆ, ”ಎಂದು ಅವರು ಅಡಿಟಿಪ್ಪಣಿ ಬರೆದಿದ್ದಾರೆ.
ವೀಡಿಯೊವನ್ನು ವೀಕ್ಷಿಸಿದ ನಂತರ, ಬಳಕೆದಾರರು ‘ಈ ಯಂತ್ರಕ್ಕೆ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಪಾಕಿಸ್ತಾನವು ಅಂತಹ ವಸ್ತುವನ್ನು ಕಂಡುಹಿಡಿರುವುದನ್ನು ನೋಡಲು ಸಂತೋಷವಾಗಿದೆ! ಎಂದು ಬರೆದಿದ್ದಾರೆ.
ಈ ವೈರಲ್ ವೀಡಿಯೊ ಸುಮಾರು 3 ಲಕ್ಷ ವೀಕ್ಷಣೆಗಳು, 1850 ರೀಟ್ವೀಟ್‌ಗಳು ಮತ್ತು 11 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!