ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅದ್ಭುತವಾದ ವನ್ಯಜೀವಿ ವೀಡಿಯೋಗಳೊಂದಿಗೆ ಅವರು ಆಗಾಗ್ಗೆ ತಮ್ಮ ಅನುಯಾಯಿಗಳನ್ನು ರಂಜಿಸುತ್ತಾರೆ. ಇತ್ತೀಚೆಗೆ, ಅವರು ಜಿಂಕೆ ಹಾವನ್ನು ತಿನ್ನುವ ಮತ್ತೊಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಜಿಂಕೆಗಳನ್ನು ಸಸ್ಯಾಹಾರಿಗಳೆಂದು ಪರಿಗಣಿಸಲಾಗುತ್ತದೆ. ಎಲೆಗಳು, ಕಾಂಡಗಳು ಮತ್ತು ಹುಲ್ಲನ್ನು ಆಹಾರವಾಗಿ ತಿನ್ನುತ್ತವೆ. ಆದರೆ, ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ಜಿಂಕೆ ಹಾವನ್ನು ತಿನ್ನುತ್ತಿರುವ ಈ ಅಪರೂಪದ ದೃಶ್ಯವನ್ನು ನೋಡಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾನೆ.
ಈ ವಿಡಿಯೋದಲ್ಲಿ ಜಿಂಕೆಯೊಂದು ಅರಣ್ಯ ಪ್ರದೇಶದಲ್ಲಿ ರಸ್ತೆ ಬದಿ ನಿಂತು ಹಾವನ್ನು ಜಗಿಯುತ್ತಿರುವ ದೃಶ್ಯವಿದೆ. ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಜಿಂಕೆಗಳು ರಂಜಕ, ಉಪ್ಪು ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಿಗಾಗಿ ಮಾಂಸವನ್ನು ತಿನ್ನುತ್ತವೆ, ವಿಶೇಷವಾಗಿ ಚಳಿಗಾಲದಲ್ಲಿ ಹುಲ್ಲುಕಡ್ಡಿ ಸಿಗುವುದು ಕಡಿಮೆಯಾದಾಗ ಮಾಂಸ ತಿನ್ನುತ್ತವೆ ಎಂದು ಹೇಳಿದೆ.
ಸಸ್ಯಾಹಾರಿ ಪ್ರಾಣಿಗಳು ಕೆಲವೊಮ್ಮೆ ಹಾವುಗಳನ್ನು ತಿನ್ನುತ್ತವೆ ಎಂದು ಹೇಳುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವಾಗ ಅವರು ಈ ಶೀರ್ಷಿಕೆಯನ್ನು ಬರೆದಿದ್ದಾರೆ. ಈ ವಿಡಿಯೋವನ್ನು ಸೈನ್ಸ್ ಗರ್ಲ್ ಎಂಬ ಪೇಜ್ ಕೂಡ ಶೇರ್ ಮಾಡಿದೆ.