ವೈರಲ್ ವಿಡಿಯೊ- ದೀಪ ಬೆಳಗುವಾಗ ಚಪ್ಪಲಿ ಕಳಚಿಟ್ಟ ತಮನ್ನಾ, ನೆಟ್ಟಿಗರ ಗುಣಗಾನ

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಇತ್ತೀಚೆಗೆ ಬಾಲಿವುಡ್ ಎಂದು ಕರೆಸಿಕೊಳ್ಳುವ ಚಿತ್ರೋದ್ಯಮದ ಗುಂಪು ಪದೇ ಪದೆ ಜನರಿಂದ ಬೇರೆ ಬೇರೆ ವಿಷಯಗಳಿಗೆ ಟೀಕೆ ಒಳಗಾಗುತ್ತಿದೆ. ದಕ್ಷಿಣದ ಚಿತ್ರರಂಗದವರಿಗಿರುವ ವೃತ್ತಿಪರತೆ, ಕತೆಯ ಕುರಿತ ಕಾಳಜಿ ಹಾಗೂ ಸಾರ್ವಜನಿಕ ವೇದಿಕೆಗಳಲ್ಲಿ ಅವರ ನಡವಳಿಕೆಗಳೆಲ್ಲ ಆಪ್ಯಾಯಮಾನವಾಗಿವೆ; ಇವರಿಗೆ ಹೋಲಿಸಿದರೆ ಬಾಲಿವುಡ್ ಕಳಪೆ ಎಂಬ ಮಾತು ಸಾಮಾಜಿಕ ಮಾಧ್ಯಮಗಳಲ್ಲಂತೂ ತುಂಬ ಪ್ರಖರವಾಗಿ ವ್ಯಕ್ತವಾಗ್ತಿರೋ ಅಭಿಪ್ರಾಯ.
ಇದಕ್ಕೆ ಪೂರಕ ಎಂಬಂತೆ ದೃಶ್ಯಾವಳಿಯೊಂದು ಟ್ವಿಟ್ಟರಿನಲ್ಲಿ ಟ್ರೆಂಡ್ ಆಗ್ತಿದೆ. ಇದು ನಡೆದಿರುವ ದಿನಾಂಕ ಖಚಿತವಾಗಿ ಗೊತ್ತಿಲ್ಲ. ಆದರೆ ವೇದಿಕೆ ಮೇಲೆ ದೀಪ ಪ್ರಜ್ವಲನ ಸಂದರ್ಭದಲ್ಲಿ ಬಾಲಿವುಡ್ ವಲಯದ ಅನುರಾಗ ಕಶ್ಯಪ್ ಮತ್ತು ತಾಪ್ಸಿ ಪನ್ನು ಪಾದರಕ್ಷೆ ಹಾಕಿಯೇ ಆ ಕೆಲಸ ಮಾಡಿದ್ದಾರೆ. ಆದರೆ, ದಕ್ಷಿಣದ ನಟಿ ತಮನ್ನಾ ಮಾತ್ರ ದೀಪ ಬೆಳಗುವ ಬಾರಿ ಬಂದಾಗ ತನ್ನ ಹೈಹೀಲ್ಡ್ ಪಾದರಕ್ಷೆ ತೆಗೆದಿರಿಸಿ ಆ ಕೆಲಸ ಮಾಡಿರೋದು ಭಾರಿ ಪ್ರಶಂಸೆಗೆ ಕಾರಣವಾಗಿದೆ. ಬಾಲಿವುಡ್ ಮಂದಿ ದಕ್ಷಿಣದವರನ್ನು ನೋಡಿ ಕಲಿಯಲಿ ಅಂತ ಅಭಿಪ್ರಾಯ ವ್ಯಕ್ತವಾಗಿದೆ.

ʼ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!