VIRAL | ಅಬ್ಬಾ..! ಒಂಟೆ ಕಾರಿನಲ್ಲಿ ಕೂತು ರೈಡ್ ಹೋಗುತ್ತಾ? ಅಷ್ಟು ಎತ್ತರದ ಪ್ರಾಣಿ ಕಾರಿನಲ್ಲಿ, ಹೇಗೆ ಸಾಧ್ಯ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೀವು ಮರುಭೂಮಿಯಲ್ಲಿ ಒಂಟೆ ಸವಾರಿ ಮಾಡುವುದನ್ನು ಕೇಳಿದ್ದೀರಿ, ಆದರೆ ನೀವು ಎಂದಾದರೂ ಕಾರಿನಲ್ಲಿ ಒಂಟೆ ಸವಾರಿ ಮಾಡುವುದನ್ನು ನೋಡಿದ್ದೀರಾ? ಒಂಟೆಯೊಂದು ಕಾರಿನ ಡಿಕ್ಕಿಯಲ್ಲಿ ಕುಳಿತು ಸವಾರಿ ಮಾಡುವ ತಮಾಷೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಅರಬ್ ದೇಶದ್ದು. ಒಂಟೆ ಸವಾರಿಯ ಬಗ್ಗೆ ಇಂಟರ್ನೆಟ್ ಬಳಕೆದಾರರು ತುಂಬಾ ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ.

ಇನ್ಸ್ಟಾಗ್ರಾಮ್ ಖಾತೆ @everydayreelsday ಮಾರ್ಚ್ 25 ರಂದು ಒಂಟೆ ಬಂಡಿ ಸವಾರಿಯ ವೀಡಿಯೊವನ್ನು ಪೋಸ್ಟ್ ಮಾಡಿದೆ. ಶೇರ್ ಮಾಡಿದ ಎರಡು ದಿನಗಳಲ್ಲಿ ವೀಡಿಯೋ 20,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಒಂಟೆಯೊಂದು ಕಾರಿನಲ್ಲಿ ಕುಳಿತು ಶಾಂತವಾಗಿ ಕತ್ತು ಚಾಚಿ, ಸುತ್ತಲೂ ನೋಡುತ್ತಾ, ಕಾರ್ ಸವಾರಿಯನ್ನು ಆನಂದಿಸುತ್ತಿರುವುದನ್ನು ನೀವು ನೋಡಬಹುದು.

 

View this post on Instagram

 

A post shared by Everyday Reelsday (@everydayreelsday)

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!