VIRASAT ROUNDS | ಬಿದಿರೆ ನಾಡಲ್ಲಿ ’ಬಿನ್ನಿ’ ಬಕ್ತಮೀಸ್ ದಿಲ್ ಜೋಶ್: ಗಾನ ವೈಭವಕ್ಕೆ ಮನಸೋತ ಜನಸಮೂಹ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಡುವಣದಲ್ಲಿ ನೇಸರ ಹೊಂಗಿರಣ ಬೀರಿ ಬೈ ಬೈ ಹೇಳುತ್ತಿದ್ದರೆ, ಇತ್ತ ಮೂಡಣ ದಿಕ್ಕಿನ ಬಿದಿರೆಯ ನಾಡಲ್ಲಿ, ಶಿಕ್ಷಣ- ಸಾಂಸ್ಕೃತಿಕ ಕಾಶಿಯ ಬೀಡಲ್ಲಿ ನಾದ ನಿನಾದ ’ಗಾನ ವೈಭವ’ ಮೊಳಗಿತು.

ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ ೧೯ಕ್ಕೂ ಅಧಿಕ ಭಾಗಗಳಲ್ಲಿ ೩೫೦೦ ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬಿನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಸೇರಿದಂತೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಸ್ವರ ಮಾಧುರ್ಯಕ್ಕೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ತುಂಬಿದ ಪ್ರೇಕ್ಷಕರ ಕರತಾಡನ, ಜಯಕಾರ ಮುಗಿಲು ಮುಟ್ಟಿತು.

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಿದ ಸಭಾಂಗಣದ ಮುಂಭಾಗದ ಭವ್ಯ ವೇದಿಕೆಯಲ್ಲಿ ಬಿನ್ನಿ ಗಾನದ ಬೆಳಕು ಹರಿಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, ೨೯ನೇ ಆಳ್ವಾಸ್ ವಿರಾಸತ್ ನ ಎರಡನೇ ದಿನವಾದ ಶುಕ್ರವಾರದ ಚಿತ್ರಣ.

’ಈ ಹಾಡಲ್ಲಿ ನಾನು ಹೆಚ್ಚು ಮಾತನಾಡಬೇಕಾಗುತ್ತದೆ’ ಎಂದು ಹೇಳಿದ ಅವರು, ರಣಬೀರ್ ಕಪೂರ್ ನಟನೆಯ ’ ’ಬಕ್ತಮೀಸ್ ದಿಲ್.. ಬಕ್ತಮೀಸ್ ದಿಲ್…’ ಹಾಡಿದರು. ಇಡೀ ಸಭಾಂಗಣ ಸ್ವರ ಲೋಕದಂತೆ ಭಾಸವಾಯಿತು.

ಶಾರುಕ್ ಖಾನ್ ನಟನೆಯ ’ದಿಲ್’ ಸಿನಿಮಾದ ’ ಚೈಯ್ಯಂ ಚೈಯ್ಯಂ .. ಹಾಡಿದಾಗ ಸುಖ್ವಿಂದರ್ ಸಿಂಗ್ ಅವರನ್ನು ನೆನಪಿಸಿಕೊಂಡ ಪ್ರೇಕ್ಷಕರು ರೈಲಿನ ಲಯಕ್ಕೆ ದನಿಗೂಡಿಸಿದರು.

೧೯೮೨ ರಲ್ಲಿ ಮಿಥುನ್ ಚಕ್ರವರ್ತಿ ಹೆಜ್ಜೆ ಹಾಕಿದ ’ಡಿಸ್ಕೊ ಡ್ಯಾನ್ಸರ್’ ಸಿನಿಮಾದ ರಿಮಿಕ್ಸ್ ’ಐ ಯಾಮೇ ಡಿಸ್ಕೋ ಡ್ಯಾನ್ಸರ್…’ ಹಾಡಿದಾಗ ವಿದ್ಯಾರ್ಥಿಗಳು ಕೈ ಎತ್ತಿ ನಲಿದರು. ಅದೇ ಲಯವನ್ನು ಮುಂದುವರಿಸಿದ ಅವರು, ’ಯಾದ್ ಆರಾ ಹೇ…’ ಉಲಿದಾಗ ಎಲ್ಲರೂ ನೆನಪುಗಳ ಲಯಕ್ಕೆ ಜಾರಿದರು. ’ಬಾತ್ ಬಾಕಿ ಹೇ…’ ಸಾಲಿಗೆ ’ಹ್ಹಾ ಹ್ಹಾ …’ ಎಂದು ಪ್ರೇಕ್ಷಕರು ಸ್ವರ ಸೇರಿಸಿದರು. ನಂತರ ದೀರ್ಘ ಉಚ್ಛಾಶ್ವಾಸದ ’ಓಂ ಶಾಂತಿ ಓಂ..’ ಮಾಧುರ್ಯ. ಜೊತೆಯಲ್ಲೇ ’ತೆರಿ ಉಮರ್ ಕೇ ನವ್ ಜವಾನೊ…’ ಹಾಗೂ ’ಹೇ ಹಸೀನೋ…’. ಅದರೊಂದಿಗೆ ಅಮಿತಾಭ್ ಬಚ್ಚನ್ ನೆನಪಿಸುವ ’ಚುಮ್ಮಾ ಚುಮ್ಮಾ ದದೇ ದೇ ಚುಮ್ಮಾ’… ಎಲ್ಲವೂ ರಿಮಿಕ್ಸ್ ವಿತ್ ವೆಸ್ಟರ್ನ್ ಬೀಟ್ಸ್.
೮೦ರ ದಶಕಗಳ ಹಾಡುಗಳನ್ನು ರಿಮಿಕ್ಸ್ ಮೂಲಕ ಪಾಶ್ಚಾತ್ಯ ಫ್ಯೂ?ನ್ ನಲ್ಲಿ ನಿರಂತರವಾಗಿ ಹಾಡಿದಾಗ ವಿದ್ಯಾರ್ಥಿಗಳು ಕುಳಿತಲ್ಲೆ ನಲಿದರು.

’ಗಿಣ್ ಗಿಣ್ ತಾನಾ… ಲೆಟ್ಸ್ ಡ್ಯಾನ್ಸ್…’. ’ಯು ನೋ ಇಟ್, ಡಿಸ್ಕೊ ದಿವಾನೆ ಹೇ…’ ಹಾಡಿಗೆ ವಿದ್ಯಾರ್ಥಿಗಳ ಚಪ್ಪಾಳೆ ಸುರಿಮಳೆ.
ಪಂಜಾಬಿ ಧಾಟಿಯ ’ಲಂಡನ್ ತೂ ಮಕ್ ದಾ…’ ಹಾಗೂ ’ಓ ಘೋರಿ ನಾರಿ ಇ? ಮಿಠಾ..’ ಬಳಿಕ ’ದಿಲ್ ಕಾಲಾ ಚಸ್ಮಾ…’ ರಾಗಕ್ಕೆ ಮಕ್ಕಳು ಅನಂದದ ಕಡಲಲ್ಲಿ ತೇಲಿದರು. ’ಕಲಾ ಚಸ್ಮಾ…’ ಹಾಡಿಗೆ ಬಿನ್ನಿ ಕನ್ನಡಕ್ಕ ತೆಗೆದು ಕಣ್ಣು ಮಿಟಿಕಿಸಿ, ಕುಡಿ ನೋಟ ಬೀರಿದರು. ಬಳಿಕ ’ಸಿಂಡ್ರೇಲಾ…’ ಎಂದಾಗ ಅಭಿಮಾನಿಗಳ ಜೋಶ್ ’ಸಿಂಡ್ರೆಲಾ’ ಎಂದು ಪ್ರತಿಧ್ವನಿಸಿತು. ’ಊಂಚಿ ಹೇ ಬಿಲ್ಡಿಂಗ್, ಲಿಫ್ಟ್ ತೇರೀ ಬಂದ್ ಹೇ.. ಆಜಾ ಆಜಾ ದಿಲ್ ಬಾಜಾ…’ ಎಂಬಿತ್ಯಾದಿ ೯೦ರ ದಶಕದ ಹಾಡುಗಳು ಸಾಲು ಸಾಲಾಗಿ ಮೊಳಗಿದವು. ’ಯವ್ವಾ ಯವ್ವಾ…’ ಜೊತೆಯಾಯಿತು.

ಬಳಿಕ ದಕ್ಷಿಣದ ತಮಿಳಿಗೆ ಬಂದ ಅವರು ಪ್ರಭುದೇವ ಬ್ರೇಕ್ ಡ್ಯಾನ್ಸ್ ಖ್ಯಾತಿಯ. ’ಕಾದಲನ್’ ಸಿನಿಮಾದ ’ಮುಕ್ಕಾಲಾ ಮುಕ್ಕಾಬುಲಾ ಓ ಲೈಲಾ’ ಹಾಡು ಹಾಡಿದರು. ಹಾಡಿಗೆ ಹೆಜ್ಜೆಯೂ ಹಾಕಿದರು. ಪ್ರಭುದೇವ್ ಮಾದರಿಯ ಹೆಜ್ಜೆಗಳನ್ನು ಪುನರಾವರ್ತಿಸಿದರು.
ಬಳಿಕ ಇಂಗ್ಲಿಷ್ ಶೈಲಿಯಲ್ಲಿ ’ಲೆಟ್ಸ್ ನಾಚೋ..’ ಹಾಡಿನ ಜೊತೆ ’ವೈ ಆರ್ ವಿ ಹಿಯರ್” ಎಂದು ಸೇರಿದ ವಿದ್ಯಾರ್ಥಿ ಸಾಗರವನ್ನು ಪ್ರಶ್ನಿಸಿ, ಮತ್ತೂ ಹಲವು ಹಾಡನ್ನು ರಿಮಿಕ್ಸ್ ಮಾಡಿದರು.

ಗಾನ ವೈಭವ’ದ ಆರಂಭದಲ್ಲಿ ’ಜೋ ಚಾ ಹೆ ಉಲ್ ಫಕ್ತ್ ಹೋಗಯಾ…’ ’ಕ್ಯಾ ಕರೂ ಓ ಲೇಡಿ, ಮೈ ಆದತ್ ಸೇ ಮಜಬೂರ್…’, ’ ದಿನ್ ಮೇ, ರಾತ್ ಬ್ಯಾಂಗ್ ಬ್ಯಾಂಗ್…’ ’ಸುಭಾಹ್ ತಕ್…’, ’ಸೋಚ್ ಗಯೇ…’ ಹಾಗೂ ರಣಬೀರ್ ಕಪೂರ್ ಸಿನಿಮಾದ ’ವೋ ಲೇಡಿಸ್’ ಹಾಡು ಪುಳಕಿತಗೊಳಿಸಿದವು.

ಶಾರುಕ್ ಖಾನ್ ನಟನೆಯ “ದಿಲ್’ ಸಿನಿಮಾದ ’ ಚೈಯ್ಯಂ ಚೈಯ್ಯಂ .. ಹಾಡಿದಾಗ ಸುಖ್ವಿಂದರ್ ಅವರನ್ನು ನೆನಪಿಸಿಕೊಂಡ ಪ್ರೇಕ್ಷಕರು ರೈಲಿನ ಲಯಕ್ಕೆ ದನಿಗೂಡಿಸಿದರು.

’ಐ ಲವ್ ಯೂ ಗೈಸ್, ಐ ಲವ್ ಆಳ್ವಾಸ್.. ’ಎಂಜಾಯಿಂಗ್ ಶೋ…’ ಎಂದಾಗಲೆಲ್ಲ ಸಾಗರದ ಅಲೆಯಂತೆ ವಿದ್ಯಾರ್ಥಿಗಳ ಸಡಗರ ಹೊನಲಾಗಿ ಬಂತು.

ಮೆರುಗು ನೀಡಿದ ಆಳ್ವಾಸ್ ಸಾಂಸ್ಕೃತಿಕ ವೈಭವ
ಬಳಿಕ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಕಲಾತಂಡದಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಮನಸೂರೆಗೊಂಡಿತು. ವೈವಿಧ್ಯಮಯ ಕಲಾ ಪ್ರಕಾರಗಳ ಪ್ರದರ್ಶನ ನೋಡುಗರನ್ನು ಮೋಡಿ ಮಾಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!