ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ದಿನಗಳ ಹಿಂದೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಇದೀಗ ಕೊಹ್ಲಿ ಭವಿಷ್ಯ ಎಂದು ಹೇಳುವ ಪೋಸ್ಟ್ ಒಂದು ವೈರಲ್ ಆಗಿದೆ.
ಜ್ಯೋತಿಷಿಯೊಬ್ಬರು ವಿರಾಟ್ ವೃತ್ತಿ ಜೀವನ, ವೈವಾಹಿಕ ಜೀವನ ಎಲ್ಲದರ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಪೋಸ್ಟ್ ಪ್ರಕಾರ ಈವರೆಗೂ ಜ್ಯೋತಿಷಿ ಬರೆದಿರುವ ಎಲ್ಲವೂ ನಿಜವಾಗಿದೆ.
ವಿರಾಟ್ ಕೊಹ್ಲಿ ಎರಡನೇ ಬಾರಿಗೆ 2024ರಲ್ಲಿ ತಂದೆಯಾಗಲಿದ್ದಾರೆ ಎಂದು ಹೇಳಲಾಗಿದೆ. ಅಂತೆಯೇ ವಿರಾಟ್ ಈ ವರ್ಷ ಗಂಡು ಮಗುವಿನ ತಂದೆಯಾಗಿದ್ದಾರೆ. ಈ ಪೋಸ್ಟ್ 2016 ರಲ್ಲಿ ಪ್ರಕಟವಾಗಿದ್ದು, ಇದೀಗ ಮತ್ತೆ ವೈರಲ್ ಆಗಿದೆ.
ಆಗಸ್ಟ್ 2025 ರಿಂದ ಫೆಬ್ರವರಿ 2027ವರೆಗೂ ವಿರಾಟ್ ಕಷ್ಟದ ದಿನಗಳನ್ನು ಅನುಭವಿಸುತ್ತಾರೆ. ಕಳಪೆ ಫಾರ್ಮ್‌ನಲ್ಲಿರುತ್ತಾರೆ, ಆದರೆ 2027ರಲ್ಲಿ ಮತ್ತೆ ಕೊಹ್ಲಿ ಟಾಪ್ 1 ಸ್ಥಾನಕ್ಕೆ ಬಂದು 2028 ರಲ್ಲಿ ನಿವೃತ್ತಿ ಹೊಂದುತ್ತಾರೆ ಎಂದು ಬರೆಯಲಾಗಿದೆ.