October 9, 2026
Friday, October 9, 2026
spot_img

IPL | ಕೊಹ್ಲಿ ಕಮಾಲ್‌ಗೆ ಎಲ್ಲರೂ ದಂಗು, ಮೊದಲ ಸ್ಥಾನಕ್ಕೆ ಜಿಗಿದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆ ಕೊಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ನಡೆದ ಆರ್‌ಸಿಬಿ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಕಮಾಲ್‌ ಮಾಡಿದ್ದಾರೆ. ವಿರಾಟ್‌ ಶತಕದ ನೆರವಿನಿಂದ ಆರ್‌ಸಿಬಿ ಮತ್ತೆ ಮೊದಲನೇ ಸ್ಥಾನಕ್ಕೆ ಏರಿದೆ.

ಮೊದಲಿಗೆ ಬ್ಯಾಟಿಂಗ್‌ ಮಾಡಿದ ಕೆಕೆಆರ್‌ 193 ರನ್‌ಗಳನ್ನು ಬಾರಿಸಿತ್ತು. ಆದರೆ ಆರ್‌ಸಿಬಿಯ ಚೇಸಿಂಗ್‌ ಮಾಸ್ಟರ್‌ ವಿರಾಟ್‌ ಕೊಹ್ಲಿ ನೆರವಿನಿಂದ ಇನ್ನೂ ಐದು ಎಸೆತ ಬಾಕಿ ಇರುವಾಗಲೇ ಪಂದ್ಯ ಮುಗಿದಿದೆ. ಆರ್‌ಸಿಬಿ ಗೆದ್ದು ಬೀಗಿದೆ.

ಮೊದಲಿನಿಂದ ರಿಲ್ಯಾಕ್ಸ್‌ ಆಗಿ ಆಡದ ಕೊಹ್ಲಿ ಆಕ್ರಮಣಕಾರಿ ಆಟ ಆರಂಭಿಸಿದ್ರು ಬರೀ 32 ಎಸೆತಗಳಲ್ಲಿ 50 ರನ್‌ ಹೊಡೆದಿದ್ದ ಕೊಹ್ಲಿ, 58 ಎಸೆತಗಳಲ್ಲಿ ಶತಕ ಬಾರಿಸಿದರು. ಒಟ್ಟಾರೆ 105 ರನ್‌ ಹೊಡೆದು ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದಾರೆ.

ಇದೀಗ ಆರ್‌ಸಿಬಿ ಲಿಸ್ಟ್‌ನಲ್ಲಿ ಮೊದಲನೇ ಸ್ಥಾನದಲ್ಲಿದೆ. 12 ಪಂದ್ಯಗಳಿಂದ 1.053 ನೆಟ್‌ ರನ್‌ರೇಟ್‌ ಆರ್‌ಸಿಬಿಗೆ ಇದೆ.

https://x.com/IPL/status/2054636687310090395?ref_src=twsrc%5Etfw%7Ctwcamp%5Etweetembed%7Ctwterm%5E2054636687310090395%7Ctwgr%5E14d5f5c6bf4ff185de980c955d369aeca7cb4309%7Ctwcon%5Es1_&ref_url=https%3A%2F%2Fpublictv.in%2Fipl-2026-rcb-vs-kkr-virat-kohli-rewrites-history-breaks-chris-gayles-world-record%2F

Must Read