September 16, 2026
Wednesday, September 16, 2026
spot_img

IPL | ಪ್ಲೇ ಆಫ್ ನತ್ತ ಕಣ್ಣಿಟ್ಟ ಆರ್​ಸಿಬಿ, ಕೆಕೆಆರ್ ಗೆ ನಿರಾಸೆ: ಮ್ಯಾಚ್ ಗೆ ವರುಣನ ಎಂಟ್ರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ನಲ್ಲಿ ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಗೆ ವರುಣ ತಡೆ ನೀಡಿದ್ದು, ಹೀಗಾಗಿ ಟಾಸ್ ವಿಳಂಬವಾಗಿದೆ.

ರಾಯ್‌ಪುರದಲ್ಲಿ ಭಾರೀ ಮಳೆಯಾಗಿದೆ. ಪಿಚ್ ಕವರ್ ಮಾಡಲಾಗಿದೆ. ಸದ್ಯ ಮಳೆ ನಿಂತಿದ್ದು ಸಿಬ್ಬಂದಿಗಳು ಮೈದಾನದಲ್ಲಿನ ನೀರು ತೆಗೆಯುವ ಕೆಲಸದಲ್ಲಿ ನಿರಂತರರಾಗಿದ್ದಾರೆ.

ಪ್ಲೇ ಆಫ್ ದೃಷ್ಟಿಯಿಂದ ಉಭಯ ತಂಡಗಳಿಗೂ ಪಂದ್ಯ ನಿರ್ಣಾಯಕವಾಗಿದೆ. ಬೆಂಗಳೂರು 11 ಪಂದ್ಯಗಳನ್ನು ಆಡಿ ಏಳು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋಲು ಅನುಭವಿಸಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಸತತ 5 ಸೋಲುಗಳ ಬಳಿಕ ಸತತ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಪ್ಲೇಆಫ್‌ಗೆ ತಲುಪಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !