ವಿರಾಟ್‌ ಅಬ್ಬರಕ್ಕೆ ದಂಗಾದ ಚಾಹಲ್‌, ಅಶ್ವಿನ್‌, ಜಡ್ಡು: ಘಾತಕ ಫಾರ್ಮ್‌ಗೆ ಮರಳಿದ್ರಾ ಕೊಹ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರಿಕೆಟ್‌ ಜಗತ್ತಿನ ಸೂಪರ್‌ ಸ್ಟಾರ್ ವಿರಾಟ್‌ ಕೊಹ್ಲಿ ಬ್ಯಾಟ್‌ ಬ್ಯಾಟ್‌ ಇತ್ತೀಚೆಗೆ ಸದ್ದು ಮಾಡುತ್ತಿಲ್ಲ. ವಿರಾಟ್‌ ಕೊನೆಯ ಶತಕ ಸಿಡಿಸಿ ಬರೋಬ್ಬರಿ ಮೂರು ವರ್ಷಗಳೇ ಕಳೆದಿವೆ. ಫಾರ್ಮ್‌ ಮರಳಿ ಪಡೆಯಲು ಪಣ ತೊಟ್ಟಿರುವ ಕೊಹ್ಲಿ, ವೆಸ್ಟ್‌ ಇಂಡೀಸ್‌, ಜಿಂಬಾಬ್ವೆ ಸರಣಿಗಳಿಂದ ಹೊರಗುಳಿದಿದ್ದರು. ಇದೀಗ ಬಹಳ ಸಮಯದ ನಂತರ ಭಾರತ ತಂಡಕ್ಕೆಮರಳಿರುವ ಕೊಹ್ಲಿ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಏಷ್ಯಾ ಕಪ್‌ ಗಾಗಿ ಯುಎಇನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಬುಧವಾರ ಮೊದಲ ಟ್ರೈನಿಂಗ್ ಸೆಷನ್ ನಡೆಸಿದೆ. ಈ ವೇಳೆ ಕೊಹ್ಲಿ ಸಿಡಿಸಿದ ಸ್ಫೋಟಕ ಹೊಡೆತಗಳನ್ನು ಕಂಡು ಅವರಿಗೆ ಬೌಲ್‌ ಮಾಡುತ್ತಿದ್ದ ಬೌಲರ್‌ ಗಳು ದಂಗಾಗಿದ್ದಾರೆ. ಎಲ್ಲಾ ಎಸೆತಗಳನ್ನು ಮಿಡ್ಲ್‌ ಮಾಡುತ್ತಿದ್ದ ಕೊಹ್ಲಿ ತಾನು ಮತ್ತೆ ಹಳೇ ಫಾರ್ಮ್‌ ಗೆ ಮರಳಿರುವ ಸೂಚನೆ ನೀಡಿದ್ದಾರೆ. ಅದರಲ್ಲಿಯೂ ಸ್ಪಿನ್ನರ್‌ ಗಳಾದ ಯುಜ್ವೇಂದ್ರ ಚಹಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಅವರ ಎಸೆತಗಳನ್ನು ಮನಬಂದಂತೆ ದಂಡಿಸಿದ್ದು ಚೆಂಡು ಬೌಂಡರಿ ಗೆರೆಯಾಚೆಗೆ ಹೋಗಿ ಬಿದ್ದಿದೆ. ಅವರು ಮುನ್ನುಗ್ಗಿ ಬಂದು ಬ್ಯಾಟ್‌ ಬೀಸುತ್ತಿದ್ದರೆ ಹೇಗೆ ಬಾಲ್‌ ಎಸೆಯುವುದು ಎಂದು ತೋಚದೆ ಬೌಲರ್‌ ಗಳು ನಿಂತಿದ್ದಾರೆ. ಬಿಸಿಸಿಐ ಈ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ವಿಶ್ರಾಂತಿಗೆ ತೆರಳಿದ್ದ ಕೊಹ್ಲಿ ಸಾಕಷ್ಟು ತಯಾರಿ ನಡೆಸಿದ್ದರು. ಜಿಮ್​​​ ಹಾಗೂ ನೆಟ್ಸ್‌ ನಲ್ಲಿ ಕೊಹ್ಲಿ ನಿರಂತರವಾಗಿ ಬೆವರು ಹರಿಸುತ್ತಿರುವ ವಿಡಿಯೋಗಳು ಹೊರಬಿದ್ದಿದ್ದವು. ಫಾರ್ಮ್‌ ಮರಳಿ  ಪಡೆಯಲು ಭರ್ಜರಿ ತಯಾರಿ ನಡೆಸಿಯೇ ಕೊಹ್ಲಿ ಯುಎಇ ನೆಲಕ್ಕೆ ಬಂದಿಳಿದಿದ್ದಾರೆ. ಈ ಬಾರಿ ಅವರ ಅಬ್ಬರ ನೋಡಬಹುದು ಎಂಬುದು ಕ್ರೀಡಾ ವಿಶ್ಲೇಷಕರ ಅಭಿಪ್ರಾಯ.  ಟಿ20 ಯಲ್ಲಿ 91 ಇನ್ನಿಂಗ್ಸ್‌ಗಳಿಂದ 3308 ರನ್ ಗಳಿಸಿರುವ ಕೊಹ್ಲಿ ಆ.28ರಂದು ನಡೆಯಲಿರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ  100ನೇ ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ಆ ಪಂದ್ಯದಲ್ಲಿ ನಾವು ಖಂಡಿತವಾಗಿಯೂ ಹಳೆಯ ಕೊಹ್ಲಿಯನ್ನು ನೋಡಲಿದ್ದೇವೆ ಎಂಬುದು ಅಭಿಮಾನಿಗಳ ವಿಶ್ವಾಸ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!