ಟಿ20 ವಿಶ್ವಕಪ್​ನಲ್ಲಿ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಟ್ವೆಂಟಿ-20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ 1000 ರನ್ ಪೂರೈಸಿದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ವಿರಾಟ್ ಕೊಹ್ಲಿ ೨೨ ಪಂದ್ಯವಾಡಿ ಒಟ್ಟು 1001 ರನ್​ ಕಲೆಹಾಕಿದ್ದಾರೆ.
ಇದಕ್ಕೂ ಮುನ್ನ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಈ ಸಾಧನೆ ಮಾಡಿದ್ದರು. ಜಯವರ್ಧನೆ ಟಿ20 ವಿಶ್ವಕಪ್​ನಲ್ಲಿ 31 ಇನಿಂಗ್ಸ್ ಮೂಲಕ ಒಟ್ಟು 1016 ರನ್​ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದರು.
ವಿರಾಟ್‌ ಕೊಹ್ಲಿ ಕ್ರಿಸ್‌ ಗೇಲ್‌ ಅತೀ ಹೆಚ್ಚು ರನ್ ದಾಖಲೆಯನ್ನು ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದ್ದಾರೆ.‌ ಕ್ರಿಸ್‌ ಗೇಲ್‌ 33 ಪಂದ್ಯಗಳಿಂದ 965 ರನ್‌ ಗಳಿಸಿದ್ದರು.
ಭಾರತದ ನಾಯಕ ರೋಹಿತ್‌ ಶರ್ಮ 35 ಪಂದ್ಯಗಳಿಂದ 904 ರನ್‌ ಕಲೆ ಹಾಕಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್‌ ೩೫ ಪಂದ್ಯಗಳಿಂದ 987 ರನ್‌ ಗಳಿಸಿ 5ನೇ ಸ್ಥಾನದಲ್ಲಿದ್ದಾರೆ.
ಇನ್ನು ವಿರಾಟ್ ಕೊಹ್ಲಿಗೆ ಮಹೇಲ ಜಯವರ್ಧನೆ ಹೆಸರಿನಲ್ಲಿರುವ ವಿಶ್ವ ದಾಖಲೆ ಮುರಿಯಲು ಕೇವಲ 16 ರನ್​ಗಳ ಅವಶ್ಯಕತೆಯಿದೆ. ಹೀಗಾಗಿ ಮುಂದಿನ ಪಂದ್ಯಗಳ ಮೂಲಕ ಟಿ20 ವಿಶ್ವಕಪ್​ನ ಟಾಪ್ ರನ್ ಸರದಾರನಾಗಿ ಕೊಹ್ಲಿ ಹೊರಹೊಮ್ಮುವ ನಿರೀಕ್ಷೇಯಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!