October 10, 2026
Saturday, October 10, 2026
spot_img

ಪಡಿಕ್ಕಲ್ ಆಟಕ್ಕೆ ಫಿದಾ ಆದ ಕೊಹ್ಲಿ: RCB ಗೆಲುವಿನ ಕ್ರೆಡಿಟ್ ಸೇರಿದ್ದು ಯುವ ಬ್ಯಾಟರ್‌ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ದಾಖಲಿಸಿದ ಬಳಿಕ, ವಿರಾಟ್ ಕೊಹ್ಲಿ ತಂಡದ ಗೆಲುವಿನ ಹಿಂದಿನ ನಿಜವಾದ ಹೀರೋ ಯಾರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರ ಪ್ರಕಾರ, ಈ ಗೆಲುವಿನ ಪ್ರಮುಖ ಶಕ್ತಿ ದೇವದತ್ ಪಡಿಕ್ಕಲ್ ಅವರ ನಿರ್ಭೀತ ಬ್ಯಾಟಿಂಗ್.

206 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಆರ್‌ಸಿಬಿಗೆ ಆರಂಭಿಕ ಹಂತದಲ್ಲೇ ಆತ್ಮವಿಶ್ವಾಸ ತುಂಬಿದ್ದು ಪಡಿಕ್ಕಲ್ ಆಟ. ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡದೇ, ಕೇವಲ ಕ್ರಿಕೆಟ್ ಶಾಟ್‌ಗಳ ಮೂಲಕವೇ ವೇಗವಾಗಿ ರನ್ ಕಲೆಹಾಕಿದ ಅವರ ಆಟ ತಂಡದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿತು ಎಂದು ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ:

ವಿಶೇಷವಾಗಿ ವೇಗಿ ಕಗಿಸೊ ರಬಾಡ ಎಸೆದ ಮೊದಲ ಚೆಂಡನ್ನೇ ಬೌಂಡರಿಗೆ ಅಟ್ಟಿದ ಕ್ಷಣದಿಂದಲೇ ಪಂದ್ಯದ ದಿಕ್ಕು ಬದಲಾಗಿತ್ತು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಬೌಲರ್‌ಗಳ ಶ್ರಮವನ್ನೂ ಕೊಹ್ಲಿ ಕೊಂಡಾಡಿದರು. ಒಂದು ಹಂತದಲ್ಲಿ ಗುಜರಾತ್ 230ಕ್ಕೂ ಹೆಚ್ಚು ರನ್ ಗಳಿಸುವ ಸೂಚನೆ ನೀಡಿದ್ದರೂ, ಕೊನೆಯ ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ಕಟ್ಟುನಿಟ್ಟಿನ ದಾಳಿ ನಡೆಸಿ ಎದುರಾಳಿಯನ್ನು 205ಕ್ಕೆ ಸೀಮಿತಗೊಳಿಸಿದರು. ಇದುವೇ ಗೆಲುವಿಗೆ ಬಲವಾದ ಅಡಿಪಾಯವಾಯಿತು ಎಂದರು.

Must Read