July 15, 2026
Wednesday, July 15, 2026
spot_img

ICC: ವಿಶ್ವಕಪ್ ಕ್ರಿಕೆಟ್ ಇನ್ಮುಂದೆ ಮತ್ತಷ್ಟು ರೋಮಾಂಚನ: ಬದಲಾಯ್ತು ಟೂರ್ನಿ ನಿಯಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮುಂಬರುವ ಪುರುಷರ ಮೆಗಾ ಟೂರ್ನಿಗಳ ಸ್ವರೂಪದಲ್ಲಿ ಭಾರಿ ಬದಲಾವಣೆ ತಂದಿದೆ. ಇತ್ತೀಚೆಗೆ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, 2027ರ ಏಕದಿನ ವಿಶ್ವಕಪ್ ಹಾಗೂ 2028ರ ಟಿ20 ವಿಶ್ವಕಪ್ ಪಂದ್ಯಗಳನ್ನು ಇನ್ನಷ್ಟು ರೋಮಾಂಚನಕಾರಿಯಾಗಿಸಲು ಹೊಸ ಮಾದರಿಯನ್ನು ಅನುಮೋದಿಸಲಾಗಿದೆ.

ಆತಿಥ್ಯ ಮತ್ತು ತಂಡಗಳ ವಿವರ

ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿರುವ 2027ರ ಏಕದಿನ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಕಣಕ್ಕಿಳಿಯಲಿವೆ. ಪಂದ್ಯಗಳ ರೋಚಕತೆ ಹೆಚ್ಚಿಸಲು ಐಸಿಸಿ ಈ ಬಾರಿ 3 ಪ್ರಮುಖ ಹಂತಗಳನ್ನು ಪರಿಚಯಿಸಿದೆ.

ಹೊಸ 3 ಹಂತದ ಕ್ರಿಕೆಟ್ ಫಾರ್ಮ್ಯಾಟ್

  • ಮೊದಲ ಹಂತ (ಅರ್ಹತಾ ಸುತ್ತು): ವಿಶ್ವಕಪ್‌ಗೆ ಅರ್ಹತೆ ಪಡೆದ 14 ತಂಡಗಳಲ್ಲಿ ಕೊನೆಯ 3 ಸ್ಥಾನದಲ್ಲಿರುವ ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಸೆಣಸಾಡಲಿವೆ. ಇಲ್ಲಿ ಗೆಲ್ಲುವ ಟಾಪ್ 1 ತಂಡ ಮುಂದಿನ ಹಂತ ತಲುಪಲಿದೆ.
  • ಎರಡನೇ ಹಂತ (ಗುಂಪು ಹಂತ): ಉಳಿದ 12 ತಂಡಗಳನ್ನು ತಲಾ 6 ತಂಡಗಳಂತೆ ಎರಡು ಗ್ರೂಪ್‌ಗಳಾಗಿ ಹಂಚಲಾಗುತ್ತದೆ. ಪ್ರತಿ ಗುಂಪಿನಿಂದ ಅಗ್ರ 3 ತಂಡಗಳು ಮತ್ತು 4ನೇ ಸ್ಥಾನ ಪಡೆದ ಅತ್ಯುತ್ತಮ 1 ತಂಡ ಸೇರಿ ಒಟ್ಟು 7 ತಂಡಗಳು ಮುಂದಿನ ಸುತ್ತಿಗೆ ಲಗ್ಗೆ ಇಡಲಿವೆ.
  • ಮೂರನೇ ಹಂತ (ಸೂಪರ್-7 ಮತ್ತು ಸೆಮಿಫೈನಲ್): ಸೂಪರ್-7 ತಲುಪಿದ ಏಳು ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿದ್ದು, ಟಾಪ್ 4 ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ನಾಕೌಟ್‌ನಲ್ಲಿ 1ನೇ ಸ್ಥಾನಿ ವರ್ಸಸ್ 4ನೇ ಸ್ಥಾನಿ ಹಾಗೂ 2ನೇ ಸ್ಥಾನಿ ವರ್ಸಸ್ 3ನೇ ಸ್ಥಾನಿ ನಡುವೆ ಫೈಟ್ ನಡೆಯಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !