ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅಲಭ್ಯವಾಗಲಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿ ಟಿ20 ಪಂದ್ಯದಿಂದ ಬಯೋ ಬಬಲ್ ಮುರಿದು ಇಬ್ಬರು ಮನೆಗೆ ವಾಪಾಸ್ ಆಗಿದ್ದಾರೆ.
ಬಯೋ ಬಬಲ್ ಇರುವ ಕಾರಣ ಕೊಹ್ಲಿಗೆ ಬಿಸಿಸಿಐ ವಿಶ್ರಾಂತಿ ನೀಡಿದ್ದು, ಮುಂದೆ ಫೆ.24ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯಗಳಲ್ಲೂ ವಿರಾಟ್ ಕೋಹ್ಲಿ ಭಾಗವಹಿಸುವುದಿಲ್ಲ ಎಂದು ವರದಿ ತಿಳಿಸಿದೆ.
ಇನ್ನು ನಿನ್ನೆ ನಡೆದ 2ನೇ ಪಂದ್ಯದಲ್ಲಿ ವಿರಾಟ್ (52). ರಿಷಭ್ ಪಂತ್ (52) ರನ್ ಗಳಿಸುವ ಮೂಲಕ ಪಂದ್ಯದ ಗೆಲುವಿಗೆ ಕಾರಣರಾದರು.
ಭಾರತ ಹಾಗೂ ಶ್ರೀಲಂಕಾ ನಡುವಿನ ಸರಣಿ ಪಂದ್ಯಕ್ಕೆ ಟೀಂ ಇಂಡಿಯಾದ ತಂಡ ಇನ್ನು ಪ್ರಕಟಗೊಂಡಿಲ್ಲ. ಇಂದು ರಾತ್ರಿಯೊಳಗೆ ತಂಡದ ಆಟಗಾರರು ಆಯ್ಕೆಯಾಗುವ ಸಾಧ್ಯತೆ ಇದೆ. ಈ ಪಂದ್ಯಗಳು ಬೆಂಗಳುರು ಮತ್ತು ಮಹಾಲಿಯಲ್ಲಿ ನಡೆಯಲಿದೆ.