ಬಲೂಚಿಸ್ತಾನದ ಮರಳಿನಲ್ಲಿ ಅರಳಿದ ವಿರಾಟ್ ಕೊಹ್ಲಿ ಕಲಾಕೃತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲಿ ಅಭಿಮನಿಗಳು ಇದ್ದು, ಅಪಾರ ಮೆಚ್ಚುಗೆ ಪಡೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಹಲವು ಬಾರಿ ಕೊಹ್ಲಿಯ ಫೋಟೋಗಳು ಪಾಕ್ ಸಹಿತ ವಿವಿಧ ಕ್ರಿಕೆಟ್ ಸ್ಟೇಡಿಯಂನಲ್ಲಿ ರಾರಾಜಿಸಿದೆ.

ಇದೀಗ ಪ್ರಸ್ತುತ T20 ವಿಶ್ವಕಪ್‌ನಲ್ಲಿ ಕೊಹ್ಲಿ ಪ್ರಭಾವಶಾಲಿ ಪ್ರದರ್ಶನ ಪಾಕ್ ಗಡಿಯ ಇನ್ನೊಂದು ಬದಿಯಲ್ಲಿ ಬೆಂಬಲಿಗರ ಮನಸ್ಸಿನ ಜಾಗ ಮಾಡಿದೆ.

ಪಾಕ್‌ ವಿರುದ್ಧ ಅಮೋಘ ಬ್ಯಾಟಿಂಗ್ ಬಳಿಕ ಪಾಕ್ ನಲ್ಲಿ ಕೊಹ್ಲಿ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಪಾಕಿಸ್ತಾನದ್ದೇ ಪ್ರಾಂತ್ಯ ಎನಿಸಿಕೊಂಡಿರುವ ಬಲೂಚಿಸ್ತಾನದಲ್ಲೂ ಕೊಹ್ಲಿ ಗೆ ಗೌರವವಾಗಿ, ಅಲ್ಲಿನ ಅಭಿಮಾನಿಯೊಬ್ಬರು ಮರಳು ಕಲಾಕೃತಿಯನ್ನು ರಚಿಸಿದ್ದಾರೆ.

ಪಾಕಿಸ್ತಾನದ ಕ್ರೀಡಾ ಸುದ್ದಿ ವೆಬ್‌ಸೈಟ್, ಕ್ರಿಕೆಟ್ ಪಾಕಿಸ್ತಾನದ ಪ್ರಕಾರ, ಬಲೂಚಿಸ್ತಾನದ ಗದ್ದಾನಿಯಲ್ಲಿ ಕಲಾವಿದರೊಬ್ಬರು ತಮ್ಮ ಅಭಿಮಾನ ವ್ಯಕ್ತಪಡಿಸಲು ವಿರಾಟ್ ಕೊಹ್ಲಿಯನ್ನು ಮರಳಿನ ಮೇಲೆ ಚಿತ್ರಿಸಿದ್ದಾರೆ.

 

ವಿರಾಟ್ ಕೊಹ್ಲಿಯ ಬೃಹತ್ ರೇಖಾಚಿತ್ರವನ್ನು ಚಿತ್ರಿಸಿರುವ ಗದ್ದಾನಿಯ ಅಭಿಮಾನಿಗಳು, “ಲವ್ ಫ್ರಮ್ ಆರ್ ಎ ಗದ್ದಾನಿ” ಎಂಬ ಸಂದೇಶದೊಂದಿಗೆ ವಿಡಿಯೋ ಮಾಡಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಿಂಗ್ ಕೊಹ್ಲಿ ಅಭಿಮಾನಿಗಳಿಂದ ಬಲುಚಿಸ್ತಾನದ ಫ್ಯಾನ್ಸ್​ಗಳ ಅಭಿಮಾನಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!