ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ್ದು, ಫೈನಲ್ ಪಂದ್ಯ ಗೆಲ್ಲುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಬಳಿ ಓಡಿ ಹೋಗಿ ಬಿಗಿದಪ್ಪಿಕೊಂಡರು.
ಇನ್ನು ಈ ಫೈನಲ್ ಪಂದ್ಯ ಮುಕ್ತಾಯವಾಗುತ್ತಲೇ ವಿರಾಟ್ ಕೊಹ್ಲಿ ಅವರ ಆಪ್ತ ಸ್ನೇಹಿತ ಎಬಿಡಿ ಬೌಂಡರಿ ಲೈನ್ ನಿಂದ ಹಾರಿ ಮೈದಾನದ ಒಳಗೆ ನುಗ್ಗಿದರೆ, ಇತ್ತ ಕೊಹ್ಲಿ ಕೂಡ ಎಬಿಡಿ ಇದ್ದ ಸ್ಥಳದತ್ತ ಓಡಿದರು. ಇಬ್ಬರೂ ಆಟಗಾರರು ಪರಸ್ಪರ ಬಿಗಿದಪ್ಪಿ ಗೆಲುವನ್ನು ಭಾವುಕರಾಗಿ ಸಂಭ್ರಮಿಸಿದರು.
ಒಂದೆಡೆ ವಿರಾಟ್ ಕೊಹ್ಲಿ ಕಣ್ಣೀರು ಹಾಕಿದರೆ, ಕೊಹ್ಲಿಯನ್ನು ನೋಡಿದ ಎಬಿಡಿ ಕೂಡ ಕೊಂಚ ಭಾವುಕರಾದರು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
Two of the people who have given everything to #RCB. ABD and Virat ❤️#IPLFinal #RCBvsPBKSpic.twitter.com/ANx19MvxPT
— STOIC 🇭🇹⚒️⚔️ (@GunhaonKaDevta) June 3, 2025