ಹೊಸದಿಗಂತ ಡಿಜಿಟಲ್ ಡೆಸ್ಕ್
ಭೋಪಾಲ್ನ ವೈರಾಲಜಿ ಸಂಸ್ಥೆ ನಡೆಸಿದ ಪರೀಕ್ಷಾ ವರದಿ ಹೊರಬಿದ್ದಿದ್ದು, ಕೇರಳದ ಪತ್ತನಂತಿಟ್ಟದ ತಿರುವಲ್ಲಾದ ನಿರಣಂನಲ್ಲಿರುವ ಸರ್ಕಾರಿ ಬಾತುಕೋಳಿ ಸಂವರ್ಧನಾ ಕೇಂದ್ರದಲ್ಲಿ ಹಕ್ಕಿಜ್ವರ ವ್ಯಾಪಿಸುತ್ತಿರುವುದು ದೃಢಪಟ್ಟಿದೆ.
ಕಳೆದ ವಾರ ಬಾತುಕೋಳಿ ಸಾಕಾಣಿಕೆ ಕೇಂದ್ರದಲ್ಲಿ ಬಾತುಕೋಳಿಗಳು ಸಾಮೂಹಿಕವಾಗಿ ನಿಗೂಢ ಸಾವಿಗೊಳಗಾಗಿದ್ದವು. ಈ ಹಿನ್ನೆಲೆಯಲ್ಲಿ ಬಾತುಕೋಳಿಗಳ ಮೃತದೇಹದ ಮಾದರಿಗಳನ್ನು ಪರೀಕ್ಷೆಗಾಗಿ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿತ್ತು.
ಪರೀಕ್ಷಾ ವರದಿಗಳು ಹಕ್ಕಿಜ್ವರ ಇರುವುದನ್ನು ಖಚಿತಪಡಿಸಿವೆ. ರಾಜ್ಯಕ್ಕೆ ಹೊಸ ಆತಂಕವಾಗಿ ಕಾಲಿಟ್ಟಿರುವ ಹಕ್ಕಿಜ್ವರವನ್ನು ಮಟ್ಟ ಹಾಕಲು ಸರ್ಕಾರ ಈಗಾಗಲೇ ಸಮರೋಪಾದಿಯ ಸಿದ್ಧತೆಗಳನ್ನು ಆರಂಭಿಸಿದೆ.