ವಿರುಷ್ಕಾ ಮಗಳ ಫೋಟೊ ವೈರಲ್: ವಿರಾಟ್ ಕೊಹ್ಲಿ ಹೋಲುತ್ತಾಳಾ ವಮಿಕಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಮಗಳು ಇದೇ ಮೊದಲ ಬಾರಿಗೆ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಿದ್ದಾರೆ.
ನಿನ್ನೆ ನಡೆದ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ಪಂದ್ಯದ ವೇಳೆ ಅನುಷ್ಕಾ ಪೆವಿಲಿಯನ್​ನಲ್ಲಿ ಮಗಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಆಗ ಸೆರೆಯಾದ ವಿಡಿಯೋದಲ್ಲಿ ವಿರಾಟ್‌ ಪುತ್ರಿ ವಮಿಕಾಳ ಫೇಸ್ ರಿವೀಲ್‌ ಆಗಿದೆ.

Imageಅರ್ಧ ಶತಕ ಸಿಡಿಸಿದ ಖುಷಿಯಲ್ಲಿ ಮಗಳನ್ನು ನೋಡಿ ವಿರಾಟ್‌ ಬ್ಯಾಟ್‌ ಹಿಡಿದು ಡ್ಯಾನ್ಸ್‌ ಮಾಡಿದ ವಿಡಿಯೋ ಕೂಡ ಇದೇ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ದಂಪತಿ ಮಗಳ ಫೋಟೋವನ್ನು ಯಾರಿಗೂ ರಿವೀಲ್‌ ಮಾಡಬಾರದು ಎಂದು ಸಾಕಷ್ಟು ಪ್ರಯತ್ನ ಮಾಡುತ್ತಿದ್ದರು. ಎಷ್ಟೋ ಕಡೆ ವಮಿಕಾ ಜತೆ ಹೋದಾಗ ಮಗಳ ಫೋಟೋ ತೆಗೆಯದಂತೆ ಜನರಿಗೆ ವಿರಾಟ್‌ ಮನವಿ ಮಾಡುತ್ತಿದ್ದರು. ಆದರೆ ಈಗ ವಮಿಕಾ ಫೋಟೋ ಎಲ್ಲೆಡೆ ವೈರಲ್‌ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!