ಪಾಪು ಪ್ರಶಸ್ತಿಗೆ ಭಾಜನರಾದ ವಿಠ್ಠಲದಾಸ ಕಾಮತ್‌ ಹಾಗೂ ಮಹದೇವಯ್ಯ

ಹೊಸದಿಗಂತ ವರದಿ ಧಾರವಾಡ:
ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶುಕ್ರವಾರ ನಡೆದ ಪತ್ರಕರ್ತರ ದಿನಾಚರಣೆ ಸಮಾರಂಭದಲ್ಲಿ ಸಾಧನಾ ಡಾ. ಪಾಟೀಲ ಪುಟ್ಟಪ್ಪ ರಾಷ್ಟ್ರೀಯ ಶ್ರೇಷ್ಠ ಪ್ರಶಸ್ತಿ ಹಾಗೂ ಛಾಯಾಗ್ರಾಹಕ ರಾಜ್ಯ ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭ ಗುರುವಾರ ನಡೆಯಿತು.

ರೂ.10 ಸಾವಿರ ನಗದು, ಸ್ಮರಣಿಕೆ, ಫಲಕ ಒಳಗೊಂಡ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಹೆಸರಿನ ರಾಷ್ಟ್ರೀಯ ಶ್ರೇಷ್ಠ ಪತ್ರಕರ್ತ ಪ್ರಶಸ್ತಿಯನ್ನು ಹೊಸದಿಗಂತ ಪತ್ರಿಕೆ ಹುಬ್ಬಳ್ಳಿ ಸ್ಥಾನಿಕ ವ್ಯವಸ್ಥಾಪಕ ವಿಠ್ಠಲದಾಸ ಕಾಮತ್ ಅವರಿಗೆ ಹಾಗೂ ರೂ.5 ಸಾವಿರ ನಗದು ಒಳಗೊಂಡ ಶ್ರೇಷ್ಠ ಛಾಯಾಗ್ರಾಹಕ ರಾಜ್ಯ ಪ್ರಶಸ್ತಿ ಹಿರಿಯ ಛಾಯಾಗ್ರಾಹಕ ಮಹಾದೇವಯ್ಯ ಪಾಟೀಲ ಅವರಿಗೆ ಪ್ರದಾನಮಾಡಲಾಯಿತು.

ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣನವರ ಪತ್ರಿಕೋದ್ಯಮದ ಪ್ರಸ್ತುತ ಸವಾಲುಗಳ ಕುರಿತು ಉಪನ್ಯಾಸ ನೀಡಿದರು‌. ಸಮಾರಂಭದಲ್ಲಿ ಸಾಧನಾ ಸಂಸ್ಥೆ ಅಧ್ಯಕ್ಷೆ ವಿಶ್ವೇಶ್ವರಿ ಹಿರೇಮಠ, ಪ್ರೊ. ನಾಗರಾಜ ಹಳ್ಳಿ, ಡಾ. ಇಸೆಬೇಲ್ಲಾ ಝೇವಿಯರ್, ಮಾರ್ತಾಂಡಪ್ಪ ಕತ್ತಿ, ಪ್ರಕಾಶ ಉಡಕೇರಿ ಅನೇಕರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!