2028 ರ ವೇಳೆಗೆ ವಿಝಿಂಜಂ ಬಂದರಿನ ಕಾಮಗಾರಿ ಪೂರ್ಣಗೊಳ್ಳಲಿದೆ: ಕೇರಳ ಸಿಎಂ ಪಿಣರಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳದ ವಿಝಿಂಜಂ ಅಂತರಾಷ್ಟ್ರೀಯ ಬಂದರಿನಲ್ಲಿ ಮೊದಲ ಮಾತೃಶಿಪ್ “ಸ್ಯಾನ್ ಫೆರ್ನಾಂಡೋ” ಅನ್ನು ಸ್ವಾಗತಿಸಿದರು.

ಹಡಗನ್ನು ಸ್ವಾಗತಿಸಿದ ಸಿಎಂ, ಈಗ ಭಾರತವು ವಿಜಿಂಜಂ ಬಂದರಿನ ಮೂಲಕ ಜಾಗತಿಕ ಭೂಪಟವನ್ನು ಪ್ರವೇಶಿಸಿದೆ ಮತ್ತು ಇದು ಭಾರತಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು.

“ವಿಶ್ವದ ಅತಿದೊಡ್ಡ ಹಡಗುಗಳು ವಿಝಿಂಜಾಂನಲ್ಲಿ ಕಾರ್ಯಾಚರಣೆಯು ಪ್ರಾಯೋಗಿಕ ರನ್ ಮೂಲಕ ಪ್ರಾರಂಭವಾಗುತ್ತಿದೆ. ಮತ್ತು ಶೀಘ್ರದಲ್ಲೇ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ” ಎಂದು ಸಿಎಂ ವಿಜಯನ್ ಹೇಳಿದ್ದಾರೆ.

“ಈಗ ಮೊದಲ ಹಂತವು ಪೂರ್ಣಗೊಳ್ಳುತ್ತಿದೆ. ಹಂತ ಎರಡರಿಂದ ನಾಲ್ಕನೇ ಹಂತವನ್ನು 2045 ರ ವೇಳೆಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದು 2028,17 ವರ್ಷಗಳ ಮುಂಚಿತವಾಗಿ ಪೂರ್ಣಗೊಳ್ಳುತ್ತದೆ” ಎಂದು ತಿಳಿಸಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!