ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಐಸ್ ಲ್ಯಾಂಡ್ ನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಕಳೆದ ಡಿಸೆಂಬರ್ ನಿಂದ ಈ ವರೆಗೂ ಸತತ 7 ಬಾರಿ ಜ್ವಾಲಾಮುಖಿ ಸ್ಫೋಟವಾಗಿ ಲಾವಾರಸ ಹರಿಯುತ್ತಿದೆ.
ಐಸ್ ಲ್ಯಾಂಡ್ ನ ರಿಕ್‌ಜೇನ್ಸ್ ಪ್ರಾಂತ್ಯದ ಗ್ರಿಂಡ್‌ವಿಕ್ ಗ್ರಾಮದಲ್ಲಿರುವ ಸುಂಧ್ನುಕಗಿಗರ್ ಜ್ವಾಲಾಮುಖಿ ಬುಧವಾರ ರಾತ್ರಿ ಸ್ಫೋಟಿಸಿದ್ದು, ಮೀನುಗಾರಿಕೆಯನ್ನೇ ನಂಬಿರುವ ಗ್ರಾಮದಲ್ಲಿ ಲಾವಾರಸ ಹರಿಯುತ್ತಿದೆ.
2024ರಲ್ಲಿ ಏಳನೇ ಬಾರಿ ಇಲ್ಲಿ ಜ್ವಾಲಾಮುಖಿ ಸ್ಪೋಟಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರನ್ನು ಸ್ಥಳಾಂತರಗೊಳಿಸಲಾಗಿದೆ. ಈ ವರೆಗೂ ಯಾವುದೇ ಜೀವಹಾನಿಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದು, ಆಸ್ತಿ-ಪಾಸ್ತಿ ನಷ್ಟದ ಕುರಿತು ಈಗಷ್ಟೇ ಮಾಹಿತಿ ಕಲೆಹಾಕಬೇಕಿದೆ ಎಂದು ಐಸ್‌ಲ್ಯಾಂಡ್‌ನ ಹವಾಮಾನ ಇಲಾಖೆ ವರದಿ ಮಾಡಿದೆ.
2021ರವರೆಗೂ ಕಳೆದ ಒಂದು ಶತಮಾನದಲ್ಲಿ ಈ ಪ್ರಾಂತ್ಯದಲ್ಲಿ ಜ್ವಾಲಾಮುಖಿ ಸ್ಫೋಟಿಸಿರಲಿಲ್ಲ. 2021ರ ನಂತರದಲ್ಲಿ ಇಲ್ಲಿ ಭೂಕಂಪನ ಆರಂಭಗೊಂಡಿತು. ಬಳಿಕ ನಿರಂತರವಾಗಿ ಇಲ್ಲಿ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿದ್ದು, ಡಿಸೆಂಬರ್ ನಿಂದ ಈ ವರೆಗೂ ಇಲ್ಲಿ ಬರೊಬ್ಬರಿ 7 ಬಾರಿ ಜ್ವಾಲಾಮುಖಿ ಸ್ಫೋಟವಾಗಿದೆ.
ಬುಧವಾರ ಸಂಭವಿಸಿದ ಜ್ವಾಲಾಮುಖಿಯಿಂದಾಗಿ ಕೆಂಪು ಹಾಗೂ ಕಿತ್ತಳೆ ಬಣ್ಣದ ಲಾವಾರಸವು ದಟ್ಟ ಹೊಗೆಯೊಂದಿಗೆ ಹರಿಯುತ್ತಿರುವುದು ಕಂಡುಬಂದಿದೆ.