ನಮ್ಮ ಮೆಟ್ರೋ ಯೋಜನೆಯ 3ನೇ ಹಂತದಲ್ಲಿ 2 ಹೊಸ ಮಾರ್ಗಗಳಿಗೆ ಸಂಪುಟ ಅಸ್ತು

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮ್ಮ ಮೆಟ್ರೋದ 3 ನೇ ಹಂತದಲ್ಲಿ ಎರಡು ಹೊಸ ಮಾರ್ಗಗಳ ನಿರ್ಮಾಣಕ್ಕೆ ಕರ್ನಾಟಕ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯ ನಂತರ ಹಣಕಾಸು ಸಚಿವ ಕೃಷ್ಣ ಬೈರೇಗೌಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಬೆಂಗಳೂರಿನ ಪ್ರಮುಖ ಸಮಸ್ಯೆ ಸಾರಿಗೆಯೇ ಇದಕ್ಕೆ ಮೆಟ್ರೋ ಸೂಕ್ತ ಆಯ್ಕೆಯಾಗಿದೆ’ ಎಂದರು.

ಸಂಚಾರ ದಟ್ಟಣೆ ಬೆಂಗಳೂರಿನ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕೆ ಮೆಟ್ರೋ ಉತ್ತಮ ಪರಿಹಾರವಾಗಿದೆ. ಮೆಟ್ರೋದ 2ಎ ಮತ್ತು 2ಬಿ ಹಂತಗಳು ಒಂದರಿಂದ ಎರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಂಪುಟ ನಮ್ಮ ಮೆಟ್ರೋದ ಮೂರನೇ ಹಂತವನ್ನು ಅನುಮೋದಿಸಿದೆ. ಮೂರನೇ ಹಂತದ ಮೆಟ್ರೋದಲ್ಲಿ ಎರಡು ಮಾರ್ಗಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಕೃಷ್ಣ ಬೈರಗೋಡ ತಿಳಿಸಿದರು.

ನಮ್ಮ ಮೆಟ್ರೋದ 3 ನೇ ಹಂತವು 44.65 ಕಿಮೀ ಉದ್ದವಿದೆ. , ಎರಡು ಹೊಸ ಮಾರ್ಗಗಳನ್ನು ಹೊಂದಿರಲಿದೆ. ಒಂದು ಮಾರ್ಗವು ಜೆ.ಪಿ.ನಗರದಿಂದ ಕೆಂಪಾಪುರ ಮತ್ತು ಎರಡನೇ ಮಾರ್ಗವು ಹೊಸಹಳ್ಳಿಯಿಂದ ಕಡಬಗೆರೆಗೆ ಸಂಪರ್ಕ ಕಲ್ಪಿಸುತ್ತದೆ. ಮೂರನೇ ಹಂತದ ಮೆಟ್ರೋ ಕಾಮಗಾರಿಗೆ ಸುಮಾರು 15,611 ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ ಶೇ.80ಕ್ಕಿಂತ ಹೆಚ್ಚಿನ ಮೊತ್ತವನ್ನು ರಾಜ್ಯ ಸರಕಾರವೇ ಭರಿಸಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!