ಏರ್ ಇಂಡಿಯಾದ 4,500 ನೌಕರರ ಸ್ವಯಂ ನಿವೃತ್ತಿ: ಹೊಸ ವ್ಯವಸ್ಥೆ ರೂಪಿಸೋದಕ್ಕೆ ಟಾಟಾ ಕಂಪನಿ ಮಾಡ್ತಿರೋದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಏರ್‌ ಇಂಡಿಯಾದಲ್ಲಿ ಹೊಸ ಪ್ರತಿಭೆಗಳಿಗಳಿಗೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಟಾಟಾ ಗ್ರುಪ್‌ ಜೂನ್‌ 1ರಂದು ಸ್ವಯಂ ನಿವೃತ್ತಿ ಯೋಜನೆಯನ್ನು (VRS) ಪರಿಚಯಿಸಿದೆ. ಇದರಡಿಯಲ್ಲಿ ಸುಮಾರು 4,500 ಉದ್ಯೋಗಿಗಳು ನಿವೃತ್ತಿ ಆಯ್ದುಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಹೆಚ್ಚುವರಿಯಾಗಿ, ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 4,000 ಜನರು ಕಂಪನಿಯಿಂದ ನಿವೃತ್ತರಾಗುತ್ತಾರೆ ಎನ್ನಲಾಗಿದೆ.

ಕೆಲ ವರದಿಗಳ ಪ್ರಕಾರ ಕಂಪನಿಯ ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹಳೇ ವ್ಯವಸ್ಥೆಗಳನ್ನು ಡಿಜಿಟಲೀಕರಣಗೊಳಿಸಿ ಪುನರುಜ್ಜೀವನಗೊಳಿಸಲಾಗುತ್ತಿದೆ. ಅಲ್ಲದೇ ಹೊಸ ಪ್ರತಿಭೆಗಳನ್ನು ನೇಮಿಸಿಕೊಳ್ಳಲು ಟಾಟಾ ಗ್ರುಪ್‌ ಮೆಟ್ರೋ ನಗರಗಳಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದೆ. ತನ್ನ ಹಾರಾಟ ಸಾಮರ್ಥ್ಯವನ್ನು ನವೀಕರಿಸಲು ಏರ್‌ಬಸ್ A350 ಜೆಟ್‌ಗಳು ಮತ್ತು ಬೋಯಿಂಗ್‌ನ ಕಿರಿದಾದ ದೇಹದ ವಿಮಾನಗಳನ್ನು ಖರೀದಿಸಲು ಕಂಪನಿ ಯೋಚಿಸುತ್ತಿದೆ ಎನ್ನಲಾಗಿದೆ.

ಏರ್ ಇಂಡಿಯಾವು ಕಾಲ್ ಸೆಂಟರ್‌ಗಳು, ವೆಬ್‌ಸೈಟ್ ಮತ್ತು ಗ್ರಾಹಕರ ಅನುಭವವನ್ನು ನಿರ್ವಹಿಸಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಟಾಟಾ ಡಿಜಿಟಲ್ ಸೇರಿದಂತೆ ಟಾಟಾ ಗ್ರೂಪ್ ಕಂಪನಿಗಳಿಂದ ಜನರನ್ನು ನೇಮಿಸಿಕೊಳ್ಳುತ್ತಿದೆ. ಇದು ಕಾರ್ಯಗತಗೊಳಿಸುವಿಕೆ ಮತ್ತು ಗ್ರಾಹಕ ಸೇವೆಯನ್ನು ಸುಧಾರಿಸುವ ಕೆಲಸ ಮಾಡುತ್ತಿದೆ ಎಂದು ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!