ದೇಶದ ಮೇಲೆ ಪ್ರೀತಿಯಿದ್ರೆ ಫಸ್ಟ್‌ ವೋಟ್‌ ಮಾಡಿ: ಕಿಚ್ಚ ಸುದೀಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದೇಶದ ಮೇಲೆ ಪ್ರೀತಿಯಿದ್ರೆ ಮೊದಲು ವೋಟ್‌ ಮಾಡಿ, ಮನೆಯಲ್ಲೂ ಕೂತು ಟೈಮ್‌ ಪಾಸ್‌ ಮಾಡಬೇಡಿ. ಪ್ರೀತಿ ಇದ್ರೆ ಬನ್ನಿ, ಇಲ್ಲದಿದ್ರೆ ಬೇಡ ಎಂದು ಕಿಚ್ಚ ಸುದೀಪ ಹೇಳಿದ್ದಾರೆ.

ಜೆಪಿ ನಗರದ ಆಕ್ಸ್‌ಫರ್ಡ್ ಸ್ಕೂಲ್‌ಗೆ ಆಗಮಿಸಿ ಮತದಾನ ಮಾಡಿದ ಸುದೀಪ್,  ದೇಶದ ಮೇಲೆ ಪ್ರೀತಿ ಇರುವವರು ಬಂದು ವೋಟ್ ಹಾಕಬೇಕು. ಕೆಲವರು ಹೇಳಿದ್ರೂ ಬಂದು ಹಾಕಲ್ಲ. ಅಂತಹವರನ್ನು ಏನೂ ಮಾಡೋಕೆ ಆಗುತ್ತೆ. ಯಾರು ಬಂದು ವೋಟ್ ಹಾಕುತ್ತಾರೆ ಅವರಿಗೆ ಗೌರವ ಕೋಡೊಣ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!