ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ನೆಕ್ಸ್ಟ್, ವೋಟ್ ಫಸ್ಟ್ ಎಂದು ವರನೊಬ್ಬ ಮತಗಟ್ಟೆಗೆ ಬಂದಿದ್ದಾನೆ.
ಚಾಮರಾಜನಗರ ತಾಲೂಕಿನ ಸಂತೇಮರಳ್ಳಿಯಲ್ಲಿ ವರ ಚೇತನ್ ಮತಗಟ್ಟೆ ಸಂಖ್ಯೆ 60ರಲ್ಲಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಇಂದು ದೀಪಿಕಾ ಎಂಬ ವಧು ಜೊತೆ ವರ ಚೇತನ್ ಅವರ ವಿವಾಹ ನಿಗದಿಯಾಗಿತ್ತು. 9 ಗಂಟೆಗೆ ಮುಹೂರ್ತ ಇದ್ದ ಹಿನ್ನೆಲೆ ಅದಕ್ಕೂ ಮೊದಲು ವರ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.