ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರನೇ ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಕುಟುಂಬ ದೆಹಲಿಯಲ್ಲಿ ಮತಚಲಾಯಿಸಿದರು.
ಮತದಾನ ಮಾಡಿ ಮತನಾಡಿದ ಕೇಜಿವಾಲ್ ನಿರುದ್ಯೋಗ, ಹಣದುಬ್ಬರ, ಸರ್ವಾಧಿಕಾರದ ವಿರುದ್ಧ ಮತಹಾಕಿದ್ದೇನೆ, ನಿಮ್ಮ ಪ್ರತಿಯೊಂದು ಮತವೂ ಸರ್ವಾಧಿಕಾರಿ ಚಿಂತನೆ ವಿರುದ್ಧ ಮತ್ತು ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ, ನೀವು ಹೋಗಿ ಮತ ಚಲಾಯಿಸಿ ಎಂದರು. ನನ್ನ ತಾಯಿ ತೀವ್ರ ಅನಾರೋಗ್ಯದಿಂದ ಬಳಲುತಿದ್ದಾರೆ ಅವರು ಮತದಾನ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.