ರಾಯಚೂರಿನಲ್ಲಿ ಪೊಲಿಂಗ್‌ ಏಜೆಂಟ್‌ ಜೊತೆ ಮತದಾರರ ವಾಗ್ವಾದ! ಕಾರಣ ಮೊಬೈಲ್‌

ದಿಗಂತ ವರದಿ ರಾಯಚೂರು :

ಮತಗಟ್ಟೆ ಒಳಗೆ ಮೊಬೈಲ್ ತೆಗೆದುಕೊಂಡು ಹೋಗದಂತೆ ತಡೆದಿದ್ದಕ್ಕೆ ಪೊಲಿಂಗ್ ಏಜೆಂಟ್‌, ಮತದಾರರು ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆ ವಾಗ್ವಾದನಡೆಸಿದ ಘಟನೆ ನಗರದಲ್ಲಿ ಜರುಗಿದೆ.

ರಾಯಚೂರು ನಗರದ ಬ್ರೆಸ್ತವಾರ ಪೇಟೆಯ ಮತಗಟ್ಟೆ ಸಂಖ್ಯೆ 99 ರಲ್ಲಿ ಈ ಘಟನೆ ಜರುಗಿದದೆ.

ಮೊಬೈಲ್ ಒಳಗಡೆ ಬಿಡುವಂತೆ ಏಜೆಂಟರು, ಮತದಾರರ ಒತ್ತಾಯ ಮಾಡಿದ್ದಾರೆ ಆದರೆ ಮತಗಟ್ಟೆ ಒಳಗೆ ಮೊಬೈಲ್ ಬಿಡುವುದಿಲ್ಲ ಅಂತ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ. ಮತದಾನ ಆರಂಭವಾದಾಗಿನಿಂದ ಶುರುವಾದ ಈ ವಾಗ್ವಾದ. ಪೊಲೀಸ್ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಮೊಬೈಲ್ ತಗೆದುಕೊಂಡು ಹೋಗುವುದಕ್ಕೆ ಅವಕಾಶವೇ ಇಲ್ಲ ಎಂದು ಹೇಳಿದಾಗ ಸುಮ್ಮನಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!