Friday, June 2, 2023

Latest Posts

ತಾಂತ್ರಿಕ ದೋಷದಿಂದಾಗಿ ಈ ಜಿಲ್ಲೆಯಲ್ಲಿ ಒಟ್ಟು ಒಂಬತ್ತು ಸ್ಥಳಗಳಲ್ಲಿ ಮತದಾನ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಚುನಾವಣೆ ಈಗಾಗಲೇ ನೀರಸವಾಗಿ ದಾಖಲಾಗುತ್ತಿದ್ದು, ಇದರ ಜೊತೆಗೆ ಬೆಳಗಾವಿಯ ಒಂಬತ್ತು ಜಿಲ್ಲೆಗಳಲ್ಲಿ ಮತದಾನ ಸ್ಥಗಿತಗೊಂಡಿದೆ.

ತಾಂತ್ರಿಕ ದೋಷದಿಂದಾಗಿ ಕಿತ್ತೂರು ಪಟ್ಟಣ, ಗಳತಗಾ, ಅರಬಾವಿ, ನೇಸರಗಿ, ಮೂಡಲಗಿ ಪಟ್ಟಣ, ದೇವಗಾಂವ, ಕಾದ್ರೋಳ್ಳಿ, ಉಳ್ಳಿಗೇರಿ, ಅಥಣಿ ಗ್ರಾಮಗಳಲ್ಲಿ ಮತದಾನ ಸ್ಥಗಿತವಾಗಿದೆ.

ಕಿತ್ತೂರು ಪಟ್ಟಣದಲ್ಲಿ ಎರಡೂವರೆ ಗಂಟೆಯಿಂದ ಮತದಾನ ಸ್ಥಗಿತವಾಗಿದೆ. ಇನ್ನುಳಿದ ಮತಗಟ್ಟೆಗಳಲ್ಲಿ ಒಂದು ಗಂಟೆ, ಅರ್ಧ ಗಂಟೆಯಿಂದ ಸ್ಥಗಿತಗೊಂಡಿದೆ. ಬಿಸಿಲಿನ ಝಳಕ್ಕೆ ಮತಗಟ್ಟೆ ಮುಂಭಾಗದಲ್ಲಿ ಕಾದು ಕುಳಿತ ಮತದಾರರು ಹೈರಾಣಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!