ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ: 5ಗಂಟೆವರೆಗೆ ಶೇ.66.05 ವೋಟಿಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ನಡೆದಿದ್ದು, ಸಂಜೆ 5ಗಂಟೆವರೆಗೆ ಶೇ.66.05 ಮತದಾನ (Voter Turnout) ನಡೆದಿದೆ.

14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತದಾನ ಸಂಜೆ 6ಗಂಟೆವರೆಗೆ ನಡೆಯಲಿದೆ. ಸಂಜೆ 5 ಗಂಟೆ ವೇಳೆಗೆ ಶೇ. 66.05 ವೋಟಿಂಗ್‌ ದಾಖಲಾಗಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಗರಿಷ್ಠ ಶೇ.72.75 ಮತದಾನವಾಗಿದ್ದು, ಕಲಬುರಗಿಯಲ್ಲಿ ಕನಿಷ್ಠ ಶೇ.57.20 ವೋಟಿಂಗ್‌ ಆಗಿದೆ.

ಕ್ಷೇತ್ರವಾರು ಮತದಾನ ಮಾಹಿತಿ
ಚಿಕ್ಕೋಡಿ-ಶೇ. 72.75
ಬೆಳಗಾವಿ- ಶೇ.65.67
ಬಾಗಲಕೋಟೆ- ಶೇ.65.55
ವಿಜಯಪುರ-ಶೇ.60.95
ಕಲಬುರಗಿ- ಶೇ. 57.20
ರಾಯಚೂರು-ಶೇ.59.48
ಬೀದರ್‌- ಶೇ.60.17
ಕೊಪ್ಪಳ- ಶೇ.66.05
ಬಳ್ಳಾರಿ-ಶೇ.68.94
ಹಾವೇರಿ-ಶೇ.71.90
ಧಾರವಾಡ-ಶೇ.67.15
ಉತ್ತರ ಕನ್ನಡ – 69.57
ದಾವಣಗೆರೆ-ಶೇ.70.90
ಶಿವಮೊಗ್ಗ-72.07

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!