ರಾಯಚೂರು, ಬೀದರ್‌ನಲ್ಲಿ ಕೈಕೊಟ್ಟ ಮತಯಂತ್ರಗಳು, ಹಕ್ಕುದಾರ ಗರಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಉಳಿದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ಆರಂಭವಾಗಿದ್ದು, ಬೀದರ್‌ ಹಾಗೂ ರಾಯಚೂರಿನಲ್ಲಿ ಮತಯಂತ್ರಗಳು ಕೈಕೊಟ್ಟಿದ್ದು, ಮತದಾರನ ಸಿಟ್ಟಿಗೆ ಕಾರಣವಾಗಿದೆ.

ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಬೇಕಿತ್ತು. ಆದರೆ ಬೀದರ್‌ ನಗರದ ನ್ಯಾಷನಲ್ ಕಾಲೇಜಿನರುವ ಮತಗಟ್ಟೆ ಸಂಖೆ 151 ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದು ಹಿನ್ನೆಲೆ ಮತದಾನ ಪ್ರಾರಂಭವಾದರೂ ಇನ್ನೂ ಮತದಾನ ನಡೆಯದ ಕಾರಣ ಮತದಾರರು ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ‌‌‌.

ಮತ್ತೊಂದೆಡೆ ರಾಯಚೂರಿನ ಸಿಂಧನೂರು ತಾಲೂಕಿನ ಕಲ್ಮಂಗಿ ಮತಗಟ್ಟೆಯಲ್ಲೂ ಮತಯಂತ್ರ ಕೈಕೊಟ್ಟಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಬೇಕಿದ್ದ ಮತದಾನ ಅರ್ಧ ಗಂಟೆ ವಿಳಂಬವಾಗಿದೆ. ಮತದಾನ ಮಾಡಲು ಮತಗಟ್ಟೆ ಕೇಂದ್ರ ಮುಂದೆ ಜನ ಕಾದು ಕುಳಿದ ಪ್ರಸಂಗ ನಡೆಯಿತು. ಸಿಬ್ಬಂದಿ ಮತ ಯಂತ್ರ ಸರಿಪಡಿಸುತ್ತಿದ್ದಾರೆ.

ಹಕ್ಕುದಾರ ಕಾದು ಕಾದು ಗರಂ ಆಗಿದ್ದು, ಮೊದಲೇ ಇವನ್ನೆಲ್ಲ ಚೆಕ್‌ ಮಾಡಬೇಕಲ್ವ ಎಂದು ಸಿಟ್ಟಿಗೆದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!