ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನೂತನ ಸಂಸತ್‌ನ ಕ್ಯಾಂಟೀನ್‌ನಲ್ಲಿ (Parliament Canteen) ಸಂಸದರ ಜೊತೆ ಊಟ ಸವಿದರು.
ಮಧ್ಯಾಹ್ನದ ಊಟದ ಸಮಯದ ವೇಳೆ ಹಲವು ಪಕ್ಷಗಳ 8 ಮಂದಿ ಸಂಸತ್ ಸದಸ್ಯರಿಗೆ ಕರೆ ಮಾಡಿದ ಪ್ರಧಾನಿ ಮೋದಿ, ಸಂಸದರೊಂದಿಗೆ ಉಭಯಕುಶಲೋಪರಿ ಮಾತನಾಡಿದರು.
ಬಿಜೆಪಿ ಸಂಸದೆ ಹೀನಾ ಗವಿತ್, ಎಸ್.ಫಂಗ್ನಾನ್ ಕೊನ್ಯಾಕ್, ಜಮ್ಯಾಂಗ್ ತ್ಸೆರಿಂಗ್ ನಮ್ಗ್ಯಾಲ್, ಎಲ್ ಮುರುಗನ್, ಟಿಡಿಪಿ ಸಂಸದ ರಾಮಮೋಹನ್ ನಾಯ್ಡು, ಬಿಎಸ್‌ಪಿ ಸಂಸದ ರಿತೇಶ್ ಪಾಂಡೆ ಮತ್ತು ಬಿಜೆಡಿ ಸಂಸದ ಸಸ್ಮಿತ್ ಪಾತ್ರ ಅವರು ಪ್ರಧಾನಿ ಮೋದಿಯವರೊಂದಿಗೆ ಕ್ಯಾಂಟಿನ್‌ನಲ್ಲಿ ಭೋಜನ ಸೇವಿಸಿದರು.
ಮಧ್ಯಾಹ್ನ 2.30ರ ವೇಳೆಗೆ ಕರೆ ಮಾಡಿದ ಪ್ರಧಾನಿ ಮೋದಿ ಅವರೆಲ್ಲರೊಂದಿಗೆ ಭೋಜನ ಮಾಡುವುದಾಗಿ ತಿಳಿಸಿದ್ದರು. ‘ನಡೆಯಿರಿ ನಿಮಗೆಲ್ಲಾ ಒಂದು ನಾನು ಶಿಕ್ಷೆ ನೀಡುತ್ತೇನೆ’ ಎಂದು ಮೋದಿ ಕರೆಯಲ್ಲಿ ಹೇಳಿದ್ದರು ಎನ್ನಲಾಗಿದೆ. ಇದೇ ವೇಳೆ ಸಂಸತ್ ಭವನದ ಲಿಫ್ಟ್‌ನ ಡೋರ್ ಓಪನ್ ಆದಾಗ ಅವರಿಗೆ ಅಚ್ಚರಿ ಕಾದಿತ್ತು. ಪ್ರಧಾನಿ ಮೋದಿ ಅವರ ಎದುರುಗಡೆ ನಿಂತಿದ್ದರು. ಇದೇ ವೇಳೆ ಅವರೊಂದಿಗೆ ಮಾತುಕತೆಯ ವೇಳೆ ತಮ್ಮ ನೆಚ್ಚಿನ ಆಹಾರ ಕಿಚಡಿ ಎಂದು ಹೇಳಿದರು. ನಾನು ಯಾವಾಗಲೂ ಪಿಎಂ ಮೋಡ್‌ನಲ್ಲಿಯೇ ಇರೋದಿಲ್ಲ. ನನಗೆ ಕೆಲವೊಮ್ಮೆ ಉತ್ತಮ ಆಹಾರ ಕೂಡ ಬೇಕಾಗುತ್ತದೆ ಎಂದರು.
ಸಂಸದರಿಗೂ ಕೂಡ ಪ್ರಧಾನಿ ಮೋದಿ ಅವರೊಂದಿಗೆ ಕುಳಿತು ಹರಟೆ ಹೊಡೆಯುವ ಅಪರೂಪದ ಅವಕಾಶ ಸಿಕ್ಕಿತ್ತು ಈ ವೇಳೆ ಅವರು, ಬೆನ್ನುಬೆನ್ನಿಗೆ ನಿಗದಿ ಮಾಡುವ ವೇಳಾಪಟ್ಟಿಗಳು, ವಿದೇಶ ಪ್ರಯಾಣ ಹಾಗೂ ಗುಜರಾತ್‌ನ ಬಗ್ಗೆ ಅವರು ಪ್ರಶ್ನೆಗಳನ್ನು ಕೇಳಿದ್ದಾರೆ.