ಧಾರವಾಡದಲ್ಲಿ ಭಾರೀ ಗಾಳಿಮಳೆಗೆ ಕುಸಿದು ಬಿದ್ದ ಗೋಡೆ : ಇಬ್ಬರು ಕೂಲಿ ಕಾರ್ಮಿಕರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಳೆ-ಗಾಳಿಗೆ ನಿರ್ಮಾಣ ಹಂತದ ಕಾರ್ಖಾನೆ ಗೋಡೆ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಸಾವನಪ್ಪಿ, ಓರ್ವ ಗಂಭೀರ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಹಳೇ ಹುಬ್ಬಳ್ಳಿಯ ಧಾರವಾಡ ಪ್ಲಾಟ್ ನಿವಾಸಿ ದಾವೂದ್ ಸವಣೂರು (52), ನೂರಾಣಿ ಪ್ಲಾಟ್ ನಿವಾಸಿ ರಫಿಕ್‌ಸಾಬ್ ಚನ್ನಾಪುರ (50) ಮೃತ ಕಾರ್ಮಿಕರು. ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಮಹಾಂತೇಶ ಚವರಗುಡ್ಡ ಎಂಬವರಿಗೆ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಿರ್ಮಾಣ ಆಗುತ್ತಿರುವ ಕಟ್ಟಡದ ಗಾರೆ ಕೆಲಸಕ್ಕೆ ಕೂಲಿ ಕಾರ್ಮಿಕರು ತೆರಳಿದ್ದರು. ಮಳೆ, ಗಾಳಿ ಜೋರಾಗಿ ಬೀಸಿದ್ದರಿಂದ ಗೋಡೆಯ ಬಳಿ ನಿಂತಿದ್ದರು. ಗಾಳಿ ರಭಸಕ್ಕೆ ಗೋಡೆ ಕುಸಿದು ಕೆಳಗೆ ಸಿಲುಕಿ ಸಾವು ಸಂಭವಿಸಿದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!