ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ನಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ಇತ್ತ ಶಾಲೆಯೊಂದರಲ್ಲಿ ಮಕ್ಕಳು ಇರುವಾಗಲೇ ಗೋಡೆ ಕುಸಿದು ಹಲವು ಮಕ್ಕಳು ಗಾಯಗೊಂಡಿದ್ದಾರೆ. ಗುಜರಾತ್‌ನ ವಡೋದರಾದಲ್ಲಿ ಈ ಘಟನೆ ನಡೆದಿದ್ದು, ದುರ್ಘಟನೆಯ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವಡೋದರ ಜಿಲ್ಲೆಯ ವಾಘೋಡಿಯೋ ರಸ್ತೆಯಲ್ಲಿರುವ ಶ್ರೀನಾರಾಯಣ ಗುರುಕುಲ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಮಕ್ಕಳು ಮಧ್ಯಾಹ್ನ ಊಟದ ಸಮಯದಲ್ಲಿ ತರಗತಿಯಲ್ಲೇ ಊಟ ಮಾಡುತ್ತಿದ್ದಾಗ ದಿಢೀರನೇ ತರಗತಿಯ ಒಂದು ಭಾಗದ ಗೋಡೆ ಕುಸಿದಿದೆ. ಈ ವೇಳೆ ಪಕ್ಕದಲ್ಲೇ ಇದ್ದ ವಿದ್ಯಾರ್ಥಿಗಳು ಮತ್ತು ಅವರ ಡೆಸ್ಕ್ ಗಳು ಕೂಡ ಕುಸಿದಿದೆ.
गुजरात के वडोदरा में पलक झपकते दीवार भरभरा कर गिर पड़ी. कई बच्चे गंभीर रूप से घायल हैं. pic.twitter.com/BSMBzPd27n
— Gagandeep Singh (@GagandeepNews) July 20, 2024