VIRAL | ಗಣೇಶನ ಫೋಟೊ ಇರುವ ಬಿಕಿನಿ, ಇನ್ನರ್‌ವೇರ್‌ ಮಾರಾಟಕ್ಕಿಟ್ಟ ವಾಲ್‌ಮಾರ್ಟ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿಶ್ವದಾದ್ಯಂತ ಖ್ಯಾತಿ ಪಡೆದಿರುವ ವಾಲ್‌ಮಾರ್ಟ್‌ ಸಂಸ್ಥೆ ಗಣೇಶ ದೇವರಿರುವ ಬಿಕಿನಿ ಹಾಗೂ ಇನ್ನರ್‌ವೇರ್‌ ಸೇಲ್‌ ಮಾಡುತ್ತಿದ್ದು, ಇದು ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದೆ.

Image

ಹಿಂದೂ ಧರ್ಮದಲ್ಲಿ ಪೂಜಿಸಲಾಗುವ ಗಣೇಶನ ಫೋಟೋ ಬಳಸಿ ವಾಲ್‌ಮಾರ್ಟ್ ಸಂಸ್ಥೆ ವಿವಿಧ ವಿನ್ಯಾಸ ಒಳಉಡುಪು ಹಾಗೂ ಚಪ್ಪಲಿಗಳನ್ನು ತಯಾರಿಸಿ ತನ್ನ ಆನ್ಲೈನ್​​ ಮಾರುಕಟ್ಟೆಯಲ್ಲಿ ಮಾರಾಟ ಶುರು ಮಾಡಿತ್ತು.

ಗಣಪತಿ ದೇವರ ಫೋಟೋಗಳನ್ನು ಇಷ್ಟು ಕೀಳು ಮಟ್ಟದಲ್ಲಿ ಉಪಯೋಗಿಸಿರುವ ವಾಲ್‌ಮಾರ್ಟ್ ಸಂಸ್ಥೆಯ ವಿರುದ್ದ ಭಾರತ ಹಾಗೂ ಅಮೆರಿಕದಲ್ಲಿರುವ ಹಿಂದುಗಳು ಪ್ರತಿಭಟನೆ ನಡೆಸಿದ್ದು, ಬಾಯ್ಕಾಟ್‌ ವಾಲ್‌ಮಾರ್ಟ್‌ ಎನ್ನುವ ಅಭಿಯಾನವನ್ನೂ ಶುರು ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ವಾಲ್‌ಮಾರ್ಟ್‌ ಆ ಎಲ್ಲಾ ಉಡುಪುಗಳ ಮಾರಾಟವನ್ನು ತನ್ನ ಆನ್ಲೈನ್​​ ಮಾರುಕಟ್ಟೆಯಿಂದ ತೆಗೆದುಹಾಕಿ ಕ್ಷಮಾಪಣೆಯ ಕೇಳಿದೆ ಎಂದು ಹಿಂದೂ ಧರ್ಮದ ಯುನಿವರ್ಸಲ್ ಸೊಸೈಟಿಯ ಅಧ್ಯಕ್ಷರಾದ ರಾಜನ್ ಜೆಡ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!