ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಲ್ ಗರ್ಲ್ ಬೇಕಾ? ಈ ನಂಬರ್ಗೆ ಕಾಲ್ ಮಾಡಿ ಎಂದು ತನ್ನದೇ ಹೆಂಡತಿಯ ಫೋಟೊ ಹಾಗೂ ನಂಬರ್ನ್ನು ಪತಿಯೇ ಪೋಸ್ಟ್ ಮಾಡಿದ್ದಾನೆ!
ಹೌದು, ಬೆಂಗಳೂರಿನಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಸತ್ಯನಾರಾಯಣ ರೆಡ್ಡಿ ಎಂಬಾತ ಫೇಸ್ಬುಕ್ನಲ್ಲಿ ಈ ರೀತಿ ಪೋಸ್ಟ್ ಮಾಡಿದ್ದಾನೆ.
ಹೆಂಡತಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ ಸಿಟ್ಟಿನಲ್ಲಿ ಪತಿ ಈ ರೀತಿ ರಿವೇಂಜ್ ತೀರಿಸಿಕೊಂಡಿದ್ದಾನೆ. ಫೇಸ್ಬುಕ್ನಲ್ಲಿ ಫೋನ್ ನಂಬರ್ ಹಾಕಿದ್ದೇ ತಡ, ಸಾಕಷ್ಟು ಫೋನ್ ಕಾಲ್ಸ್ ಬಂದಿದ್ದು, ಮಾನಸಿಕ ಹಿಂಸೆ ಅನುಭವಿಸಿದ್ದಾರೆ.
ಪತ್ನಿಯ ಜೊತೆಗೆ ಆಕೆಯ ತಮ್ಮನ ನಂಬರ್ ಕೂಡ ಹಾಕಿ ಕಿರುಕುಳ ನೀಡಿ ಸತ್ಯನಾರಾಯಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಐದು ವರ್ಷಗಳ ಶಶಿಕಲಾ ಹಾಗೂ ಸತ್ಯನಾರಾಯಣ ಮದುವೆಯಾಗಿದ್ದರು. ಒಂದು ವರ್ಷದಿಂದ ಸತ್ಯನಾರಾಯಣ ವಿಚಿತ್ರ ವರ್ತನೆ ತೋರುತ್ತಿದ್ದು, ಮಾನಸಿಕ ಹಾಗೂ ದೈಹಿಕವಾಗಿ ಆಕೆಗೆ ತೊಂದರೆ ನೀಡುತ್ತಿದ್ದ. ಇದರಿಂದ ಶಶಿಕಲಾ ಡಿವೋರ್ಸ್ಗೆ ಅರ್ಜಿ ಹಾಕಿದ್ದಳು. ಸಿಟ್ಟಿಗೆದ್ದ ಸತ್ಯನಾರಾಯಣ ಫೇಸ್ಬುಕ್ನಲ್ಲಿ ಅವಾಂತರ ಸೃಷ್ಟಿಸಿ ಪರಾರಿಯಾಗಿದ್ದಾನೆ.
ಶಶಿಕಲಾ ಈ ಬಗ್ಗೆ ದೂರು ದಾಖಲಿಸಿದ್ದಾರೆ.