August 24, 2026
Monday, August 24, 2026
spot_img

ಗಾಢವಾದ ನಿದ್ರೆ ಬೇಕೇ? ಹಾಗಾದ್ರೆ ರಾತ್ರಿ ಊಟದ ಬಳಿಕ ಈ ಆಹಾರಗಳಿಂದ ದೂರವಿರಿ

ನಮ್ಮ ದಿನದ ಕೊನೆಯ ಆಹಾರ ಕ್ರಮವು ರಾತ್ರಿಯ ನೆಮ್ಮದಿಯ ನಿದ್ರೆ ಮತ್ತು ಮರುದಿನದ ಜೀರ್ಣಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ರಾತ್ರಿ ಊಟವಾದ ತಕ್ಷಣ ಅಥವಾ ಮಲಗುವ ಮುನ್ನ ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ತೀವ್ರ ಆಘಾತ ಉಂಟಾಗಬಹುದು ಎಂದು ಆಯುರ್ವೇದ ಮತ್ತು ಆಧುನಿಕ ವೈದ್ಯಕೀಯ ವಿಜ್ಞಾನ ಎರಡೂ ಎಚ್ಚರಿಸುತ್ತವೆ. ರಾತ್ರಿ ಊಟದ ನಂತರ ಯಾವ ಆಹಾರಗಳನ್ನು ಸೇವಿಸಬಾರದು ಮತ್ತು ಏಕೆ ಎಂಬುದರ ಬಗ್ಗೆ ತಿಳಿಯೋಣ.

ಸಿಹಿಯಾದ ಪದಾರ್ಥಗಳು ಮತ್ತು ಚಾಕೊಲೇಟ್

ರಾತ್ರಿ ಊಟದ ನಂತರ ಐಸ್‌ಕ್ರೀಮ್, ಸಿಹಿತಿಂಡಿ ಅಥವಾ ಚಾಕೊಲೇಟ್ ತಿನ್ನುವ ಅಭ್ಯಾಸ ಅನೇಕರಿಗಿರುತ್ತದೆ. ಚಾಕೊಲೇಟ್‌ನಲ್ಲಿ ಕೆಫೀನ್ ಮತ್ತು ಅಮೈನೋ ಆಮ್ಲಗಳಿರುತ್ತವೆ, ಇವು ಮೆದುಳನ್ನು ಜಾಗೃತಗೊಳಿಸಿ ನಿದ್ರಾಹೀನತೆಗೆ ಕಾರಣವಾಗುತ್ತವೆ. ಇನ್ನು ಸಿಹಿತಿಂಡಿಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ದಿಢೀರನೆ ಹೆಚ್ಚಾಗುತ್ತದೆ. ರಾತ್ರಿ ಇವುಗಳನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ದೈಹಿಕ ಶ್ರಮ ಇಲ್ಲದಿರುವುದರಿಂದ ಇವು ನೇರವಾಗಿ ಕೊಬ್ಬಾಗಿ ಬದಲಾಗಿ ತೂಕ ಹೆಚ್ಚಳಕ್ಕೆ ಕಾರಣವಾಗುತ್ತವೆ.

ಸಿಟ್ರಸ್ ಹಣ್ಣುಗಳು

ಕಿತ್ತಳೆ, ಮೂಸಂಬಿ, ನಿಂಬೆ ಅಥವಾ ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳನ್ನು ರಾತ್ರಿ ಊಟದ ನಂತರ ತಿನ್ನಬಾರದು. ಇವುಗಳಲ್ಲಿ ಆಮ್ಲೀಯತೆ ಹೆಚ್ಚಿರುತ್ತದೆ. ರಾತ್ರಿ ಮಲಗಿದಾಗ ಇವು ಹೊಟ್ಟೆಯಲ್ಲಿ ಆಮ್ಲದ ಉತ್ಪತ್ತಿಯನ್ನು ಹೆಚ್ಚಿಸಿ, ತೀವ್ರ ಎದೆಯುರಿ, ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟುಮಾಡುತ್ತವೆ.

ಮೊಸರು

ಆಯುರ್ವೇದದ ಪ್ರಕಾರ, ರಾತ್ರಿಯ ಅವಧಿಯಲ್ಲಿ ಮೊಸರು ಸೇವಿಸುವುದು ದೇಹದಲ್ಲಿ ‘ಕಫ’ ಮತ್ತು ‘ಪಿತ್ತ’ ದೋಷಗಳನ್ನು ಹೆಚ್ಚಿಸುತ್ತದೆ. ಮೊಸರು ಜೀರ್ಣಾಗಲು ಭಾರಿ ಸಮಯ ತೆಗೆದುಕೊಳ್ಳುವುದರಿಂದ, ರಾತ್ರಿ ತಿಂದರೆ ಇದು ಶ್ವಾಸಕೋಶದಲ್ಲಿ ಲೋಳೆ ಉತ್ಪತ್ತಿಯಾಗಲು ಕಾರಣವಾಗಿ ನೆಗಡಿ, ಕೆಮ್ಮು ಮತ್ತು ಅಸ್ತಮಾ ಇರುವವರಲ್ಲಿ ಉಸಿರಾಟದ ತೊಂದರೆಯನ್ನು ಉಲ್ಬಣಗೊಳಿಸುತ್ತದೆ.

ಕರಿದ ಮತ್ತು ಮಸಾಲೆಯುಕ್ತ ಸ್ನ್ಯಾಕ್ಸ್

ಊಟದ ನಂತರ ಚಿಪ್ಸ್, ಕುರ್ಕುರೆ ಅಥವಾ ಮಸಾಲೆಯುಕ್ತ ಬಜ್ಜಿಯಂತಹ ಪದಾರ್ಥಗಳನ್ನು ತಿನ್ನುವುದರಿಂದ ಜೀರ್ಣಾಂಗವ್ಯೂಹದ ಮೇಲೆ ಭಾರಿ ಒತ್ತಡ ಬೀಳುತ್ತದೆ. ಇವು ಹೊಟ್ಟೆಯಲ್ಲಿ ಜೀರ್ಣರಸಗಳ ಸಮತೋಲನವನ್ನು ತಪ್ಪಿಸಿ, ರಾತ್ರಿಯಿಡೀ ಹೊಟ್ಟೆ ಉಬ್ಬರ ಮತ್ತು ಅಜೀರ್ಣ ಕಾಡುವಂತೆ ಮಾಡುತ್ತವೆ.

ಚಹಾ ಮತ್ತು ಕಾಫಿ

ರಾತ್ರಿ ಊಟದ ನಂತರ ಬಿಸಿಬಿಸಿ ಟೀ ಅಥವಾ ಕಾಫಿ ಕುಡಿಯುವುದರಿಂದ ಅದರಲ್ಲಿರುವ ‘ಕೆಫೀನ್’ ಅಂಶವು ನಿದ್ರೆಯ ಹಾರ್ಮೋನ್ ಆದ ಮೆಲಟೋನಿನ್ ಉತ್ಪತ್ತಿಗೆ ಅಡ್ಡಿಪಡಿಸುತ್ತದೆ. ಇದು ಗಾಢ ನಿದ್ರೆಯನ್ನು ಕೆಡಿಸಿ, ಮರುದಿನ ಬೆಳಗ್ಗೆ ಆಲಸ್ಯ ಮತ್ತು ತಲೆನೋವು ಕಾಣಿಸಿಕೊಳ್ಳುವಂತೆ ಮಾಡುತ್ತದೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !