ಮಕ್ಕಳನ್ನು ಪರದೆಯಿಂದ ದೂರವಿಡಲು ಸೈಕ್ಲಿಂಗ್ ಒಂದು ಪ್ರಮುಖ ಪರ್ಯಾಯ ಮಾರ್ಗವಾಗಿದೆ. ಮಕ್ಕಳು ಪ್ರತಿದಿನ ಒಂದು ಗಂಟೆ ಸೈಕ್ಲಿಂಗ್ ಮಾಡಿದರೆ, ಅವರ ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಏರೋಬಿಕ್ ವ್ಯಾಯಾಮ: ಸೈಕ್ಲಿಂಗ್ ದೇಹದ ಎಲ್ಲಾ ಅಂಗಗಳಿಗೆ ಆಮ್ಲಜನಕವನ್ನು ಒದಗಿಸುವ ಏರೋಬಿಕ್ ವ್ಯಾಯಾಮ. ಸೈಕಲ್ ಪೆಡಲ್ಗಳನ್ನು ತುಳಿಯುವುದರಿಂದ ಕಾಲುಗಳು ಮತ್ತು ತೊಡೆಯ ಸ್ನಾಯುಗಳನ್ನು ಬಲಗೊಳ್ಳುತ್ತವೆ. ಹ್ಯಾಂಡಲ್‌ಗಳನ್ನು ಸಮತೋಲನಗೊಳಿಸುವುದರಿಂದ ಕೈ ಸ್ನಾಯುಗಳಿಗೆ ವ್ಯಾಯಾಮ ಹಾಗೂ ಸಮನ್ವಯಕ್ಕೆ ಅವಕಾಶ ನೀಡುತ್ತದೆ. ಸೈಕ್ಲಿಂಗ್ ಶ್ವಾಸಕೋಶದ ಸಾಮರ್ಥ್ಯವನ್ನು ದ್ವಿಗುಣಗೊಳಿಸುತ್ತದೆ. ಸ್ವಲ್ಪ ಹೊತ್ತು ಹೊರಗೆ ಸೈಕ್ಲಿಂಗ್ ಮಾಡುವುದರಿಂದ ಮಕ್ಕಳಿಗೆ ವಿಟಮಿನ್ ಡಿ ದೊರೆಯುತ್ತದೆ.
ಮೆದುಳಿನ ಆರೋಗ್ಯಕ್ಕೆ ಉತ್ತಮ: ಸೈಕ್ಲಿಂಗ್ ಮಾಡುವಾಗ, ಮೆದುಳು ದೇಹವನ್ನು ಸಮನ್ವಯಗೊಳಿಸುತ್ತದೆ. ಇದರಿಂದ ತೋಳುಗಳು, ಕಾಲುಗಳು ಮತ್ತು ಕಣ್ಣುಗಳ ಸಮನ್ವ ಸಾಧಿಸಲು ಸಾಧ್ಯವಾಗುತ್ತದೆ. ಇದು ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಸೈಕ್ಲಿಂಗ್ ಮಾಡುವುದರಿಂದ ಎಂಡಾರ್ಫಿನ್‌ಗಳು ಬಿಡುಗಡೆಯಾಗುತ್ತದೆ. ಇದು ಮಕ್ಕಳನ್ನು ಸಂತೋಷಪಡಿಸುತ್ತದೆ. ಜೊತೆಗೆ ಉತ್ಸಾಹ ಮೂಡಿಸುತ್ತದೆ. ಒಂಟಿತನ, ಒತ್ತಡ, ಆತಂಕ ಹಾಗೂ ಖಿನ್ನತೆ ಹತ್ತಿರಕ್ಕೂ ಸುಳಿವುದಿಲ್ಲ.
ಬೊಜ್ಜು ಬರದಂತೆ ತಡೆಯುತ್ತೆ: ಮಕ್ಕಳಲ್ಲಿ ಸೈಕ್ಲಿಂಗ್ ಅಭ್ಯಾಸವನ್ನು ಬೆಳೆಸುವುದು ತುಂಬಾ ಪ್ರಯೋಜನಕಾರಿ. ಜಂಕ್ ಫುಡ್‌ಗಳಿಂದಾಗಿ ಅನಗತ್ಯ ಕೊಬ್ಬುಗಳು ದೇಹವನ್ನು ಪ್ರವೇಶಿಸುವುದನ್ನು ಸೈಕ್ಲಿಂಗ್ ತಡೆಯಬಹುದು. ಬೊಜ್ಜು ಆ ಹಂತವನ್ನು ತಲುಪುವುದಿಲ್ಲ. ಪ್ರತಿದಿನ ಸೈಕಲ್ ಸವಾರಿ ಮಾಡುವ ಮಕ್ಕಳು ತುಂಬಾ ಜಾಗರೂಕರಾಗಿರುತ್ತಾರೆ. ಇತರ ಆಟಗಳಲ್ಲಿ ಭಾಗವಹಿಸಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅವರು ಸಮನ್ವಯಕ್ಕೆ ಒಗ್ಗಿಕೊಳ್ಳುತ್ತಾರೆ. ಮತ್ತು ಸವಾಲುಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರುತ್ತಾರೆ. ಪ್ರತಿದಿನ 4 ರಿಂದ 5 ಕಿಲೋಮೀಟರ್ ಸೈಕ್ಲಿಂಗ್ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.
ಸಮಾಜದೊಂದಿಗೆ ಬೆರೆಯಬೇಕು: ಕೆಲವು ಮಕ್ಕಳು ಶಾಲೆ ಅಥವಾ ಮನೆಗೆ ಮಾತ್ರೆ ಸೀಮಿತರಾಗಿರುತ್ತಾರೆ. ಅವರು ಇತರರನ್ನು ಭೇಟಿಯಾಗಲು ಇಷ್ಟಪಡುವುದಿಲ್ಲ. ಅಂತಹ ಮಕ್ಕಳಿಗೆ, ಸೈಕ್ಲಿಂಗ್ ಸಾಮಾಜಿಕ ಸಂವಹನದಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕಾಗುತ್ತದೆ. ಬೇರೆ ಮಕ್ಕಳೊಂದಿಗೆ ಸೈಕ್ಲಿಂಗ್ ಮಾಡುವುದರಿಂದ ಹೊಸ ಸ್ನೇಹ ಬೆಳೆಸಲು ಸಹಾಯ ಮಾಡುತ್ತದೆ. ಮಾನಸಿಕ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಒತ್ತಡವೂ ಕಡಿಮೆಯಾಗುತ್ತದೆ. ಇದರಿಂದ ಅವರು ಕ್ರಮೇಣ ಅವರು ಫೋನ್‌ಗಳಿಂದ ದೂರ ಸರಿಯುತ್ತಾರೆ ಎಂದು ತಜ್ಞರು ತಿಳಿಸುತ್ತಾರೆ. ಸೈಕ್ಲಿಂಗ್, ಸ್ವಿಮ್ಮಿಂಗ್ ಮಾಡುವುದರಿಂದ ನೀವು ಜೀವನದಲ್ಲಿ ಇವುಗಳನ್ನು ಎಂದಿಗೂ ಮರೆಯುವುದಿಲ್ಲ. ಈ ಅಭ್ಯಾಸವು ಪರಿಸರಕ್ಕೆ ತುಂಬಾ ಉಪಯುಕ್ತವಾಗಿದೆ. ಸ್ವಲ್ಪ ದೂರದವರೆಗೆ ಸೈಕ್ಲಿಂಗ್ ಮಾಡುವುದರಿಂದ ಇಂಗಾಲದ ಹೆಜ್ಜೆಗುರುತುಗಳು ಕಡಿಮೆಯಾಗುತ್ತವೆ ಹಾಗೂ ಪರಿಸರಕ್ಕೂ ತುಂಬಾ ಒಳ್ಳೆಯದು.