ಅತ್ತೆ ಮನೆಯಲ್ಲಿ ಖುಷಿಯ ಜೀವನ ನಡೆಸಬೇಕಾ? ಈ ಟಿಪ್ಸ್ ನಿಮ್ಮ ಸಹಾಯಕ್ಕೆ ಬರಬಹುದು..

ಎಲ್ಲ ಹೆಣ್ಣುಮಕ್ಕಳಿಗೂ ಮದುವೆ ಎಂದರೆ ಭಯ ಗಾಬರಿ ಇದ್ದಿದ್ದೇ. ಮದುವೆಯಾಗಿ ಗಂಡನ ಮನೆಗೆ ಹೋಗಿ ಎಲ್ಲರ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದು ಹೇಗೆ ಅನ್ನೋ ಚಿಂತೆ. ಇಷ್ಟು ವರ್ಷ ಒಂದು ರೀತಿ ಜೀವನ ನಡೆಸಿ, ಇನ್ನುಳಿದ ಜೀವನ ಎಲ್ಲ ಇನ್ನೊಂದು ರೀತಿ ನಡೆಸುವ ಭಯ ಆಕೆಗೆ ಕಾಡುವಂತದ್ದೇ. ಅತ್ತೆಯ ಮನೆಯಲ್ಲಿ ಹೊಂದಾಣಿಕೆ ಜೀವನ ನಡೆಸೋದು ಹೀಗೆ..

ಅವರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ಗಂಡನ ಜೊತೆ ಮಾತನಾಡುವಾಗ ಯಾರು ಹೇಗೆ? ಅವರಿಗೆ ಏನು ಇಷ್ಟ ಇದೆ ಇಲ್ಲಾ ಇವನ್ನೆಲ್ಲಾ ತಿಳಿದುಕೊಳ್ಳಿ.

ಹೊಂದಾಣಿಕೆ ಬೇಡ ಒಪ್ಪಿಗೆ ಬೇಕು. ಸಂದರ್ಭಗಳು, ಜನರು ಎಲ್ಲರನ್ನೂ ಒಪ್ಪಿಕೊಳ್ಳಿ. ಹೊಂದಾಣಿಕೆ ಜೀವನದಲ್ಲಿ ಖುಷಿ ಇರೋದಿಲ್ಲ.

ಅತ್ತೆ ಜೊತೆ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಪತಿಗೂ ಅದೇ ಮುಖ್ಯ. ತಾಯೊ ಹಾಗೂ ಹೆಂಡತಿ ಸಂಬಂಧ ತಾಯಿ ಮಗಳಂತೆ ಇದ್ದರೆ ಪತಿಯೂ ಖುಷ್.

ಅವರ ಸಂಪ್ರದಾಯ, ಪದ್ಧತಿಗಳಿಗೆ ಬೆಲೆ ಕೊಡಿ. ನಮ್ಮ ಮನೆಯಲ್ಲಿ ಇದನ್ನು ಮಾಡೋದಿಲ್ಲ ಎಂದು ಹೇಳಬೇಡಿ. ಅಲ್ಲಿಗೆ ಹೋದಮೇಲೆ ಅವರಿದ್ದಂತೆ ಇರಬಹುದು.

ಯಾರನ್ನೂ ಜಡ್ಜ್ ಮಾಡಬೇಡಿ. ನಿಮಗೆ ಅವರ ಬಗ್ಗೆ, ಅವರ ಹಿಂದಿನ ಜೀವನದ ಬಗ್ಗೆ ಏನೂ ಗೊತ್ತಿಲ್ಲ. ಸುಮ್ಮನೆ ಅಭಿಪ್ರಾಯ ಇಟ್ಟುಕೊಂಡು ಮನೆಯೊಳಗೆ ಹೋಗಬೇಡಿ.

ನಿಮ್ಮ ತವರು ಮನೆ ಹಾಗೂ ಗಂಡನ ಮನೆ ಎರಡೂ ಸಂಬಂಧಗಳನ್ನು ಬ್ಯಾಲೆನ್ಸ್ ಮಾಡಿ. ಒಬ್ಬರಿಗೆ ಹೆಚ್ಚು ಒಬ್ಬರಿಗೆ ಕಡಿಮೆ ಮಾಡುವ ಬುದ್ದಿ ಬೇಡ.

ಪ್ರೀತಿಯಿಂದ ಕಾಣಿ, ಅವರು ನಿಮ್ಮ ಕುಟುಂಬ ಎನ್ನುವುದು ಮನಸ್ಸಿನಲ್ಲಿ ಇರಲಿ. ಆದಷ್ಟು ಪ್ರೀತಿಯಿಂದ ಎಲ್ಲರನ್ನೂ ನೋಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!