ಬೊಜ್ಜಿನ ಸಮಸ್ಯೆ ಹಾಗೂ ಒಟ್ಟಾರೆ ತೂಕ ನಷ್ಟಕ್ಕೆ ಗ್ರೀನ್ ಟೀ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ದೇಹದ ತೂಕ, ಬಾಡಿ ಮಾಸ್ ಇಂಡೆಕ್ಸ್ ಹಾಗೂ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಹಲವು ಸಂಶೋಧನೆಗಳ ಸ್ಪಷ್ಟಪಡಿಸಿವೆ. ಪ್ರಮುಖವಾಗಿ ಟೈಪ್-2 ಡಯಾಬಿಟಿಸ್ ಸಮಸ್ಯೆ ಹೊಂದಿರುವರು ದಿನಕ್ಕೆ 800 ಮಿಲಿಗ್ರಾಂಗಿಂತ ಕಡಿಮೆ ಪ್ರಮಾಣದಲ್ಲಿ, 8 ವಾರಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಗ್ರೀನ್ ಟೀ ಸೇವಿಸಿ..
ಚಹಾ ಸಸ್ಯವು ಚಿಕ್ಕದಿರುವಾಗ ಸಂಸ್ಕರಿಸಿ ಕೊಯ್ಲು ಮಾಡಿದ ಎಲೆಗಳಿಂದ ಮಾಡುವಂತಹ ವೈಟ್ ಚಹಾವು ಹೆಚ್ಚಿನ ಮಟ್ಟದ ಕ್ಯಾಟೆಚಿನ್‌ಗಳನ್ನು ಹೊಂದಿರುತ್ತದೆ. ವೈಟ್ ಟೀ ಸೇವಿಸುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಕೊಬ್ಬು ಕರಗುತ್ತದೆ, ತೂಕವೂ ಕಡಿಮೆಯಾಗುತ್ತದೆ. 2018ರಲ್ಲಿ ಯುರೋಪಿಯನ್ ಜರ್ನಲ್ ಆಫ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವೈಟ್ ಟೀ ಸೇವನೆಯು ತೂಕ ನಷ್ಟಕ್ಕೆ ಪರಿಣಾಮಕಾರಿಯಾಗಿದೆ. ಅಧಿಕ ತೂಕ ಹೊಂದಿರುವವರಲ್ಲಿ ಚಯಾಪಚಯ ಅಪಾಯಕಾರಿ ಅಂಶಗಳನ್ನು ಕಡಿಮೆಗೊಳಿಸುತ್ತದೆ.
ಕ್ಯಾಮೆಲಿಯಾ ಸಿನೆನ್ಸಿಸ್ ಸಸ್ಯದ ಪುರ್ಹ್ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಎಲೆಗಳನ್ನು ಸಾಕಷ್ಟು ಸಮಯದವರೆಗೆ ಹುದುಗಿಸಲಾಗುತ್ತದೆ. ಹುದುಗಿಸಿದ ಪುರ್ಹ್ ಚಹಾ ಅಥವಾ ಬ್ಲಾಕ್ ಟೀ ತೂಕ ನಷ್ಟಕ್ಕೆ ಒಳ್ಳೆಯ ಫಲಿತಾಂಶ ನೀಡುತ್ತದೆ. ಪ್ರತಿದಿನ ಒಂದು ಇಲ್ಲವೇ ಎರಡು ಕಪ್ ಬ್ಲಾಕ್ ಟೀ ಸೇವಿಸುವುದರಿಂದ ಟೈಪ್ ಟು ಡಯಾಬಿಟಿಸ್ ಅಪಾಯವನ್ನು ಶೇಕಡಾ 72ರಷ್ಟು ಕಡಿಮೆಯಾಗುತ್ತದೆ. ಆರಂಭಿಕ ಪ್ರೀ ಡಯಾಬಿಟಿಸ್ ಸಮಸ್ಯೆ ಹೊಂದಿದ್ದರೆ ಅದನ್ನು ದೂರವಾಗುತ್ತದೆ. ಅಧಿಕ ಕೊಲೆಸ್ಟ್ರಾಲ್, ಮೂತ್ರಪಿಂಡದ ಕಲ್ಲು, ಆಸ್ಟಿಯೋಪೊರೊಸಿಸ್ ಅಪಾಯ ಕೂಡ ಕಡಿಮೆಯಾಗುತ್ತದೆ.
ದಾಸವಾಳ ಚಹಾವು ಬೊಜ್ಜು ಸಮಸ್ಯೆಯನ್ನು ಕಡಿಮೆ ಮಾಡುವಂತ ಗುಣಗಳನ್ನು ಹೊಂದಿದೆ. ದಾಸವಾಳ ಚಹಾವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕ್ರಮೇಣವಾಗಿ ದೇಹದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು. ದೇಹದ ಉರಿಯೂತ ಸಮಸ್ಯೆ ಕಡಿಮೆಗೊಳಿಸುತ್ತದೆ. ದೇಹದಲ್ಲಿ ಹೆಚ್ಚು ನೀರು ತುಂಬಿಕೊಂಡಿರುವ ಅಂಗಾಂಗಗಳನ್ನು ಮತ್ತೆ ಸಹಜಸ್ಥಿತಿಗೆ ಮರಳಲು ಸಹಾಯವಾಗುತ್ತದೆ. ಆರೋಗ್ಯಕರವಾದ ದೇಹ ತೂಕ ಹೊಂದಲು ಕೂಡ ಸಾಧ್ಯವಾಗುತ್ತದೆ.