ಶಿವನ ಅನುಗ್ರಹಕ್ಕೆ ಪಾತ್ರರಾಗಬೇಕಾ? ಶಿವರಾತ್ರಿ ಆಚರಣೆ ಹೇಗೆ ಮಾಡಬೇಕು? ಇಲ್ಲಿದೆ ಡೀಟೇಲ್ಸ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇವತ್ತು ಹಿಂದು ಧರ್ಮದಲ್ಲಿ ಭಗವಾನ್ ಶಿವನಿಗೆ ಅರ್ಪಿತವಾದ ಪವಿತ್ರ ದಿನ. ಅದೇ ಮಹಾ ಶಿವರಾತ್ರಿ. ಈ ದಿನ ಭಕ್ತರು ಉಪವಾಸ, ಶಿವಲಿಂಗ ಪೂಜೆ, ಅಭಿಷೇಕ, ಜಾಗರಣೆ, ಮಂತ್ರ ಜಪ, ಭಜನೆ, ಬಿಲ್ವಪತ್ರೆ ಸಮರ್ಪಣೆ ಮಾಡುವ ಮೂಲಕ ಶಿವನ ಅನುಗ್ರಹ ಪ್ರಾಪ್ತಿಗೆ ಪ್ರಾರ್ಥಿಸುತ್ತಾರೆ.

ಪ್ರತಿ ತಿಂಗಳು ಕೃಷ್ಣ ಪಕ್ಷದ ಚತುರ್ದಶಿ ತಿಥಿಯಲ್ಲಿ ಮಾಸ ಶಿವರಾತ್ರಿಯು ಬರುತ್ತದೆ, ಆದರೆ ಮಹಾ ಶಿವರಾತ್ರಿ ವಿಶೇಷವಾಗಿ ಫಾಲ್ಗುಣ ಮಾಸದಲ್ಲಿ (ಫೆಬ್ರವರಿ ಅಥವಾ ಮಾರ್ಚ್) ಆಚರಿಸಲಾಗುತ್ತದೆ.

ಪುರಾಣಗಳ ಪ್ರಕಾರ, ಈ ದಿನ ಭಗವಾನ್ ಶಿವ ಪಾರ್ವತಿಯನ್ನು ವಿವಾಹವಾದ ದಿನ, ಹಾಗೂ ಶಿವನು ಜಗತ್ತನ್ನು ರಕ್ಷಿಸಲು ವಿಷವನ್ನು ಕುಡಿದ ದಿನ ಎಂದು ಹೇಳಲಾಗುತ್ತದೆ. ಈ ಕಥೆ ನಿಮಗೆ ಗೊತ್ತಿದೆಯಾ? ಇಲ್ಲ ಅಂದ್ರೆ ಈ ಲೇಖನ ಓದಿ…..

ಸದಾಶಿವ ನೀಲಕಂಠನಾದ ಕಥೆ

ಒಮ್ಮೆ ದೇವತೆಗಳು ಮತ್ತು ಅಸುರರು ಅಮೃತವನ್ನು ಪಡೆಯಲು ಸಮುದ್ರ ಮಥನ ಮಾಡಿದರು. ಈ ಮಥನದಿಂದ ಹಲವಾರು ಅಮೂಲ್ಯ ವಸ್ತುಗಳು ಹೊರಬಂದವು, ಆದರೆ ಅವುಗಳೊಂದಿಗೆ ಅತ್ಯಂತ ಭಯಾನಕವಾದ ಹಾಲಾಹಲವು ಕೂಡ ಹೊರಬಂದಿತು.

ಈ ವಿಷವು ಜಗತ್ತಿನ ಎಲ್ಲಾ ಜೀವಿಗಳನ್ನು ನಾಶ ಮಾಡುವಷ್ಟು ಶಕ್ತಿಯುತವಾಗಿತ್ತು. ಎಲ್ಲರೂ ಭಯದಿಂದ ಭಗವಾನ್ ಶಿವನ ಬಳಿಗೆ ಧಾವಿಸಿ ವಿಶ್ವದ ರಕ್ಷಣೆಗಾಗಿ ಪ್ರಾರ್ಥಿಸಿದರು. ಆಗ ಶಿವನು ಆ ವಿಷವನ್ನು ಕುಡಿಯಲು ತಾಯಿ ಪಾರ್ವತಿಯು ಶಿವನ ಕಂಠವನ್ನು ಹಿಡಿದಿಡಲು ಶಿವನ ಕಂಠ ನೀಲವರ್ಣವಾಗಿ ಬದಲಾಯಿತು. ಆಗಿನಿಂದ ಶಿವನನ್ನು “ನೀಲಕಂಠ” ಎಂದು ಕರೆಯಲಾಯಿತು.

ಈ ಘಟನೆ ಮಹಾ ಶಿವರಾತ್ರಿ ದಿನ ಸಂಭವಿಸಿತು ಎಂದು ನಂಬಲಾಗುತ್ತದೆ, ಹಾಗಾಗಿ ಈ ದಿನವನ್ನು ಶಿವನ ಆರಾಧನೆಗಾಗಿ ಸಮರ್ಪಿಸಲಾಗುತ್ತದೆ.

ಶಿವ ಪಾರ್ವತಿಯ ವಿವಾಹ

ಹಿಂದು ಪುರಾಣಗಳ ಪ್ರಕಾರ, ಈ ದಿನ ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ವಿವಾಹವಾದ ದಿನ ಎಂದೂ ಹೇಳಲಾಗುತ್ತದೆ.

ಶಿವರಾತ್ರಿಯನ್ನು ಯಾಕೆ ಆಚರಿಸಬೇಕು?

ಆಧ್ಯಾತ್ಮಿಕ ಶುದ್ಧೀಕರಣ: ಇದು ಮನಸ್ಸನ್ನು ಶುದ್ಧಗೊಳಿಸಿ ಆಧ್ಯಾತ್ಮಿಕ ಬೆಳವಣಿಗೆ ನೀಡುತ್ತದೆ.

ಕರ್ಮ ಪರಿಹಾರ: ಪೂಜೆಯಿಂದ ಪಾಪ ವಿಮೋಚನೆ ಮತ್ತು ಜೀವನದಲ್ಲಿ ಸುಖ ಲಭಿಸುತ್ತದೆ.

ಶಕ್ತಿಯ ಬೆಂಬಲ: ಈ ದಿನ ಶಿವನ ಅನುಗ್ರಹ ಪಡೆದರೆ ನಮ್ಮ ಜೀವನದ ಸಂಕಟಗಳು ಪರಿಹಾರವಾಗಿ. ಶಿವನ ಕೃಪೆ ನಮಗೆ ದೊರೆಯುತ್ತದೆ.

ಶಿವರಾತ್ರಿಯ ಆಚರಣೆ ಹೇಗೆ?

ಭಕ್ತರು ಪೂರ್ತಿ ದಿನ ಉಪವಾಸವಿದ್ದು, ಕೇವಲ ಹಣ್ಣು, ಹಾಲು ಅಥವಾ ವ್ರತ ಆಹಾರ ಸೇವಿಸಬೇಕು.

ಭಗವಾನ್ ಶಿವನ ಆರಾಧನೆ, ಭಜನೆ, ಮಂತ್ರ ಪಠಣ ಮತ್ತು ಶ್ಲೋಕಗಳನ್ನು ಮಾಡುತ್ತಾ ಇಡೀ ರಾತ್ರಿ ಜಾಗರಣೆ ಮಾಡಬೇಕು. ಪವಿತ್ರ ಜಲದಿಂದ ಶಿವಲಿಂಗವನ್ನು ಅಭಿಷೇಕ ಮಾಡಬೇಕು. “ಓಂ ನಮಃ ಶಿವಾಯ” ಮಂತ್ರವನ್ನು ಜಪಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!