ಮಕ್ಕಳಾಗುವ ಮುಂಚೆ ಎಷ್ಟೇ ಸುತ್ತಾಡೋದಿದ್ರೂ ಸುತ್ತಿ, ಮಕ್ಕಳು ಬಂದ ನಂತರ ಎಲ್ಲಿಗೂ ಹೋಗೋಕೆ ಆಗೋದಿಲ್ಲ ಅಂತ ದೊಡ್ಡವರು ಹೇಳ್ತಾರೆ. ಆದರೆ ಹಾಗೆ ಆಗಬೇಕು ಅಂತೇನಿಲ್ಲ, ಮಕ್ಕಳ ಜೊತೆಗೇ ಟ್ರಾವೆಲ್ ಮಾಡೋದು ಹೇಗೆ ಅಂತ ಗೊತ್ತಿದ್ರೆ ಸಾಕು. ಮಕ್ಕಳ ಜೊತೆ ಸುತ್ತಾಟಕ್ಕೂ ಮುನ್ನ ಇವು ನೆನಪಿರಲಿ..
- ಅತಿಯಾದ ನಿರೀಕ್ಷೆ ಬೇಡ, ನೀವಂದುಕೊಂಡ ಹಾಗೆ ಟ್ರಿಪ್ ಆಗದಿರಬಹುದು, ಮಕ್ಕಳಿಗೆ ತಾಳ್ಮೆ ಕಡಿಮೆ, ಅವರ ತಾಳಕ್ಕೆ ನೀವು ಕುಣಿಯಲೇಬೇಕು. ಹೀಗೇ ಆಗಬೇಕು ಎನ್ನುವ ಆಸೆ ಬೇಡ, ಬಂದ ಹಾಗೆ ಹೋಗಿ..
- ಒಂದೇ ದಿನಾ ಎಲ್ಲಾ ಜರ್ನಿ ಮಾಡಿಬಿಡುತ್ತೇನೆ, ಎಲ್ಲಾ ಸ್ಥಳಗಳನ್ನು ನೋಡಿಬಿಡುತ್ತೇನೆ ಅನ್ನೋ ಆತುರ ಬೇಡ. ಜಾಣ್ಮೆಯಿಂದ ಟ್ರಿಪ್ ಪ್ಲಾನ್ ಮಾಡಿ. ಮಕ್ಕಳ ಟ್ರಿಪ್‌ಗೆ ನೀವು ಹೋಗ್ತಾ ಇದ್ದೀರ ಅನ್ನೋ ರೀತಿ ಇರಲಿ ತಯಾರಿ.
- ಮಕ್ಕಳ ಸಮಯಕ್ಕೆ ನಿಮ್ಮ ಟ್ರಿಪ್ ಪ್ಲಾನ್ ಆಗಲಿ. ಅವರು ಮಲಗುವುದು ಯಾವಾಗ, ಹಸಿವು ಯಾವಾಗ ಆಗುತ್ತದೆ. ಇವನ್ನು ಗಮನದಲ್ಲಿಡಿ.
- ಕಾರ್‌ನ್ನು ಮಕ್ಕಳಿಗೆ ಬೇಕಾದಂತೆ ರೆಡಿ ಮಾಡಿ, ಅತ್ಯಾವಶ್ಯ ಇರುವ ಸಾಮಾಗ್ರಿಗಳು ಕೈಗೆ ಸಿಗುವಂತೆ ಇಟ್ಟುಕೊಳ್ಳಿ. ಕಾರ್ ಡಿಕ್ಕಿಯಲ್ಲಿ ಸ್ವಲ್ಪ ಜಾಗ ಶುಚಿಯಾಗಿರಲಿ, ಡೈಪರ್ ಚೇಂಜ್ ಮಾಡಲು ಇದು ಒಳ್ಳೆಯ ಜಾಗ.
- ಕರ್ಟನ್ ರೀತಿ ಬಟ್ಟೆಯೊಂದನ್ನು ಕಾರ್ ವಿಂಡೋಗೆ ಹಾಕಿ, ಮಕ್ಕಳು ಮಲಗಿದಾಗ ಬೆಳಕು ಬಾರದಿರಲಿ, ಹಾಗೇ ಫೀಡಿಂಗ್‌ಗೂ ಇದು ಸಹಕಾರಿ.
- ಮಕ್ಕಳಿಗೆ ತಿನ್ನೋದಕ್ಕೆ, ಕುಡಿಯೋದಕ್ಕೆ ಏನೆಲ್ಲಾ ಬೇಕು, ಅದಕ್ಕೇ ಒಂದು ಡಬ್ಬಿ ಇರಲಿ. ಕೈಗೆ ಸಿಗುವಂತೆ ಇಟ್ಟುಕೊಳ್ಳಿ.
- ಕಾರ್‌ನಲ್ಲಿ ಓಡಾಡುವುದಾದರೆ ಕಡಿಮೆ ಜನ ಮಾತ್ರ ಹೋಗುವಂತೆ ಮಾಡಿಕೊಳ್ಳಿ. ಇಡೀ ಕಾರ್‌ನ ಜಾಗ ನಿಮ್ಮ ಮಕ್ಕಳಿಗೆ ಬೇಕು.
- ಮಗುವಿಗೆ ಆಟ ಆಡಿಸುತ್ತಾ, ಬೇರೆ ವಾಹನಗಳನ್ನು ತೋರಿಸುತ್ತಾ ಕರೆದುಕೊಂಡು ಹೋಗಿ, ಟ್ರಿಪ್ ಜೊತೆ ಒಂದಿಷ್ಟು ಪಾಠವೂ ಆಗಲಿ.
- ಪೆನ್‌ಡ್ರೈವ್ ಅಥವಾ ಮ್ಯೂಸಿಕ್ ಆಪ್‌ಗಳಲ್ಲಿ ಮಕ್ಕಳ ಹಾಡುಗಳು ಡೌನ್‌ಲೋಡ್ ಆಗಿರಲಿ. ನೆಟ್‌ವರ್ಕ್ ಸಮಸ್ಯೆಯಿಂದ ಹಾಡು ನಿಲ್ಲೋದು ಬೇಡ.