ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡ್ಬೇಕಾ? ಈ ದಿನ ಟಿಕೆಟ್ ಬೆಲೆ 107 ರೂಪಾಯಿ ಮಾತ್ರ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡೋಕೆ ಜನ ಹಿಂದೆ ಮುಂದೆ ನೋಡ್ತಾರೆ, ಇದಕ್ಕೆ ಮುಖ್ಯ ಕಾರಣ ಟಿಕೆಟ್ ಬೆಲೆ ಹಾಗೂ ಸ್ನ್ಯಾಕ್ಸ್ ಬೆಲೆ!

ಆದರೆ ಇದೀಗ ಮಲ್ಟಿಪ್ಲೆಕ್ಸ್ ಒಂದು ಬಿಗ್ ಆಫರ್ ನೀಡಿ ಜನರನ್ನು ಆಕರ್ಷಿಸುತ್ತಿದೆ. ನವೆಂಬರ್ 3ರಂದು ಎಲ್ಲ ಟಿಕೆಟ್‌ಗಳ ದರವನ್ನು 107 ರೂಪಾಯಿಗೆ ಮಲ್ಟಿಪ್ಲೆಕ್ಸ್ ನಿಗದಿ ಮಾಡಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈ ಬಾರಿ ಶತಕ ದಾಟಿ ದಾಖಲೆ ಮಾಡಿದ್ದು, 107 ಪದಕಗಳನ್ನು ಗಳಿಸಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ದರವನ್ನು 107 ರೂಪಾಯಿಗೆ ನಿಗದಿ ಮಾಡಲಾಗಿದೆ.

ಇನ್ನು ಏಷ್ಯನ್ ಗೇಮ್ಸ್‌ನಲ್ಲಿ ಮೆಡಲ್ ಗೆದ್ದವರಿಗೂ ಬಂಪರ್ ಆಫರ್ ನೀಡಿದ್ದು, ನವೆಂಬರ್ 3ರಿಂದ ಡಿಸೆಂಬರ್ 2ರವರೆಗೆ ಉಚಿತವಾಗಿ ಸಿನಿಮಾ ನೋಡುವ ಅವಕಾಶ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!