ವಕ್ಫ್ ತಿದ್ದುಪಡಿ ಮಸೂದೆ: JPC ಸಮಿತಿಯ ಮುಖ್ಯಸ್ಥರಾಗಿ ಬಿಜೆಪಿ ಸಂಸದ ಜಗದಾಂಬಿಕ ಪಾಲ್ ನೇಮಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸುವ ಸಂಸತ್ತಿನ ಜಂಟಿ ಸಮಿತಿಯ (JPC) ಅಧ್ಯಕ್ಷರಾಗಿ ಬಿಜೆಪಿಯ ಹಿರಿಯ ಸಂಸದ ಜಗದಾಂಬಿಕಾ ಪಾಲ್ ಅವರನ್ನು ನೇಮಿಸಲಾಗಿದೆ.

31 ಸದಸ್ಯರ ಸಮಿತಿಯ ಮುಖ್ಯಸ್ಥರಾಗಿ ಜಗದಾಂಬಿಕಾ ಪಾಲ್ ಅವರನ್ನು ಸ್ಪೀಕರ್ ಓಂ ಬಿರ್ಲಾ ನೇಮಕ ಮಾಡಿದ್ದಾರೆ ಎಂದು ಲೋಕಸಭೆಯ ಅಧಿಸೂಚನೆ ತಿಳಿಸಿದೆ.

ಲೋಕಸಭೆಯಿಂದ 21 ಮತ್ತು ರಾಜ್ಯಸಭೆಯಿಂದ 10 ಸದಸ್ಯರು ಜೆಪಿಸಿಯಲ್ಲಿ ಇರಲಿದ್ದು ಮುಂದಿನ ಅಧಿವೇಶನದ ವೇಳೆಗೆ ತನ್ನ ವರದಿಯನ್ನು ಸಲ್ಲಿಸಲಿದೆ. 73 ವರ್ಷದ ಪಾಲ್ ಉತ್ತರ ಪ್ರದೇಶದಿಂದ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಎಲ್ಲಾ ಪಕ್ಷಗಳೊಂದಿಗೆ ಜಗದಾಂಬಿಕಾ ಪಾಲ್ ಉತ್ತ ಸೌಹಾರ್ದ ಸಂಬಂಧ ಹೊಂದಿದ್ದಾರೆ. ಸಂಸದೀಯ ವ್ಯವಹಾರಗಳ ಖಾತೆಯನ್ನು ಹೊಂದಿರುವ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಸಮಿತಿಯ ಭಾಗವಾಗಲು ಸದಸ್ಯರನ್ನು ಹೆಸರಿಸುವ ಪ್ರಸ್ತಾವನೆಯನ್ನು ಲೋಕಸಭೆ ಮತ್ತು ರಾಜ್ಯಸಭೆ ಕಳೆದ ಶುಕ್ರವಾರ ಅಂಗೀಕರಿಸಿತು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!