ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ ಗೆ ಸಂವಿಧಾನಕ್ಕಿಂತ ವಕ್ಫ್ ಬೋಡ್೯ ದೊಡ್ಡದು ಎಂದು ಸಂಸದ ಬಸವರಾಜ ಬೊಮ್ಮಾಯಿ ಹರಿಹಾಯ್ದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಯ್ದೆ ಕಾನೂನಿಗಿಂತ ವಕ್ಫ್ ದೊಡ್ಡದು ಅನೋತರ ಕ್ಲಾಸ್ ಗಳ ದುರುಪಯೋಗ ಮಾಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ವಕ್ಫ್ ಆಸ್ತಿ ಕಂಬಳಿಸುವ ಹಾವಳಿ ನಡೆಯುತ್ತಿದೆ. ಕೇಂದ್ರ ಸರ್ಕಾರ ವಕ್ಫ್ ಬೋಡ್೯ ತಿದ್ದುಪಡಿ ಮಸೂದೆ ತರಲು ಮುಂದಾಗಿದ್ದು, ಎಲ್ಲ ದಾಖಲೆಗಳನ್ನು ಬದಲಾಯಿಸಲಾಗುತ್ತಿದೆ. ರಾತ್ರೋರಾತ್ರಿ ರೈತರ ಜಮೀನುಗಳು ವಕ್ಫ್ ಬೋಡ್೯ಗೆ ನೋಂದಣಿ ಮಾಡಿದ್ದಾರೆ ಎಂದು ಆರೋಪಿಸಿದರು.
ಒಂದು ವೇಳೆ ಬಿಜೆಪಿ ಇದನ್ನು ವಿರೋಧ ಮಾಡದಿದ್ದರೆ ರೈತರು ಆತ್ಮ ಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿತ್ತು. ಇದು ಕ್ಷಮೆಗೂ ಅರ್ಹರಲ್ಲ. ರೈತರ ಸಂಕಷ್ಟಕ್ಕೆ ಸಿಗುವಂತೆ ಮಾಡಿದ ರಾಜ್ಯ ಸರ್ಕಾರ ಎಷ್ಟು ಬೇಗ ತೋಲಗುತ್ತೋ ಅಷ್ಟು ಒಳ್ಳೆಯದು ಎಂದು ಕಿಡಿಕಾರಿದರು.
ಸಚಿವ ಜಮೀರ ಅಹ್ಮದ ಖಾನ್ ಅವರಿಗೆ ಸಂವಿಧಾನ ಹಾಗೂ ಕಾನೂನು ಸಂಬಂಧಿವಿಲ್ಲ. ಅವರು ಹೇಳುವುದೇ ಕಾನೂನು ಆಗಿದ್ದು, ರಾಜ್ಯ ಭಾರ ಮಾಡುತ್ತಿದ್ದಾರೆ. ಜೆಪಿಸಿ ರಾಜ್ಯದ ಜನರ ಸಮಸ್ಯೆ ಆಲಿಸಲು ಬಂದಿದೆ ಎಂದು ಹೇಳಿದರು.