ವಕ್ಫ್ ಆಸ್ತಿ ವಿವಾದ: ನೈಜ ವರದಿ ಸಂಗ್ರಹಕ್ಕೆ ಮೂರು ತಂಡ ರಚಿಸಿದ ಬಿಜೆಪಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಕ್ಫ್ ಆಸ್ತಿ ವಿವಾದ ಇಡೀ ರಾಜ್ಯದಲ್ಲೇ ದೊಡ್ಡ ವಿವಾದವನ್ನೇ ಹುಟ್ಟುಹಾಕಿದೆ. ಹೀಗಾಗಿ ರಾಜ್ಯಾದ್ಯಂತ ರೈತರು ಹಾಗೂ ಮಠಗಳ ಪಹಣಿಯಲ್ಲಿ ಸರ್ಕಾರದಿಂದ ವಕ್ಫ್ ಆಸ್ತಿ ಎಂದು ನಮೂದಿಸಿರುವುದರ ನೈಜ ವರದಿಯನ್ನು ಸಂಗ್ರಹಿಸಲು ಪ್ರತಿಪಕ್ಷ ಬಿಜೆಪಿ ‘ನಮ್ಮ ಭೂಮಿ- ನಮ್ಮ ಹಕ್ಕು’ ಘೋಷವಾಕ್ಯದಡಿ ಮೂರು ತಂಡಗಳನ್ನು ರಚಿಸಿದೆ. ಈ ತಂಡಗಳು ಆಯಾಯ ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ ವಿಸ್ಕೃತ ವರದಿ ಸಂಗ್ರಹಿಸಲಿದ್ದಾರೆ.

ಮೊದಲ ತಂಡ
ಬಿ. ವೈ. ವಿಜಯೇಂದ್ರ ನೇತೃತ್ವದ ಮೊದಲ ತಂಡದಲ್ಲಿ ಪ್ರಲ್ಹಾದ್ ಜೋಶಿ, ಜಗದೀಶ್ ಶೆಟ್ಟರ್, ಭಗವಂತ ಖೂಬಾ, ಡಾ. ಸಿ.ಎನ್. ಅಶ್ವತ್ಥನಾರಾಯಣ, ಮುರುಗೇಶ್ ನಿರಾಣಿ, ಬಿ. ಶ್ರೀರಾಮುಲು, ರಮೇಶ್ ಜಾರಕಿಹೊಳಿ, ಈರಣ್ಣ ಕಡಾಡಿ, ಹಾಲಪ್ಪ ಆಚಾರ್, ಸುನೀಲ್ ವಲ್ಲಾಪುರೆ ಮತ್ತು ವಕೀಲ ಎಂ.ಜಿ. ಜಿರಲಿ ಇದ್ದಾರೆ. ಈ ತಂಡಕ್ಕೆ ಪಿ. ರಾಜೀವ್ ಸಂಚಾಲಕರಾಗಿದ್ದು, ಅರುಣ್ ಶಹಾಪುರ, ಹರೀಶ್ ಪೂಂಜಾ ಮತ್ತು ಡಾ. ಶೈಲೇಂದ್ರ ಬೆಲ್ಲಾಳ ಸಂಯೋಜಕರಾಗಿದ್ದಾರೆ.

ಈ ತಂಡ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು,ಕೊಪ್ಪಳ, ಗದಗ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ.

ಎರಡನೇ ತಂಡ
ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ಎರಡನೇ ತಂಡದಲ್ಲಿ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಬಸನಗೌಡ ಪಾಟೀಲ್ ಯತ್ನಾಳ, ರಾಜೂಗೌಡ, ಎಂಪಿ ರೇಣುಕಾಚಾರ್ಯ, ಎನ್. ಮಹೇಶ್, ದೊಡ್ಡನ ಗೌಡ ಪಾಟೀಲ್, ಭಾರತಿ ಶೆಟ್ಟಿ, ಡಾ. ಬಿ. ಸಿ. ನವೀನ್ ಕುಮಾರ್ ಮತ್ತು ವಕೀಲ ವಸಂತ್ ಕುಮಾರ್ ಇದ್ದಾರೆ. ಇದಕ್ಕೆ ಪ್ರೀತಂಗೌಡ ಸಂಚಾಲಕರಾಗಿದ್ದು, ವಿನಯ್ ಬಿದರೆ, ಡಿ.ಎಸ್. ಅರುಣ್ , ಲಕ್ಷ್ಮಿ ಅಶ್ವಿನಿಗೌಡ ಸಂಯೋಜಕರಾಗಿದ್ದಾರೆ.

ಈ ತಂಡ ಚಾಮರಾಜನಗರ, ಮೈಸೂರು ನಗರ, ಗ್ರಾಂ. ಮಂಡ್ಯ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ.

ಮೂರನೇ ತಂಡ
ಮೂರನೇ ತಂಡ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ರಚಿಸಲಾಗಿದ್ದು, ಮಾಜಿ ಸಂಸದ ಅರವಿಂದ ಲಿಂಬಾವಳಿಗೆ ಸ್ಥಾನ ನೀಡಲಾಗಿದೆ, ಡಿವಿ ಸದಾನಂದಗೌಡ, ವಿ.ಸೋಮಣ್ಮ, ಸಿ.ಟಿ ರವಿ, ನಳೀನ್ ಕುಮಾರ್ ಕಟೀಲ್, ಅರವಿಂದ್ ಲಿಂಬಾವಳಿ, ಎಸ್ ಮುನಿಸ್ವಾಮಿ, ಅರಗ ಜ್ಞಾನೇಂದ್ರ, ಬಿ.ಸಿ ಪಾಟೀಲ್, ವೈ ಎ ನಾರಾಯಣಸ್ವಾಮಿ ಸೇರಿದ್ದಾರೆ.ಇದರ ಸಂಚಾಲಕರಾಗಿ ವಿ ಸುನೀಲ್ ಕುಮಾರ್, ಸಂಯೋಜಕರಾಗಿ ಅಶ್ವಥ್ ನಾರಾಯಣ, ತಮ್ಮೇಗೌಡ ಹಾಗೂ ಅಂಬಿಕಾ ಹುಲಿನಾಯ್ಕರ್ ನೇಮಿಸಲಾಗಿದೆ.

ಈ ತಂಡವು ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಧುಗಿರಿ, ಚಿತ್ರದುರ್ಗ, ದಾವಣಗೆರೆ, ಹಾವೇರಿ ಹಾಗೂ ಹುಬ್ಬಳ್ಳಿ ಜಿಲ್ಲೆಗೆ ಭೇಟಿ ನೀಡಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!