ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಮದರಸಾಗಳ ವಿರುದ್ಧ ಅಖಾಡಕ್ಕೆ ಇಳಿದ ಉತ್ತರಾಖಂಡ ಸರಕಾರ, ಕೇವಲ 15 ದಿನಗಳಲ್ಲಿ 52 ಅಕ್ರಮ ಮದರಸಾಗಳನ್ನು ಸೀಲ್ ಮಾಡಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸೂಚನೆ ಬೆನ್ನಲ್ಲೇ ಅಧಿಕಾರಿಗಳು ರಾಜ್ಯಾದ್ಯಂತ 52ಕ್ಕೂ ಹೆಚ್ಚು ನೋಂದಣಿಯಾಗದ ಮತ್ತು ಕಾನೂನುಬಾಹಿರವಾಗಿ ನಡೆಸುತ್ತಿದ್ದ ಮದರಸಾಗಳನ್ನು ಸೀಲ್ ಮಾಡಿದ್ದಾರೆ.
ಪಶ್ಚಿಮ ಡೆಹ್ರಾಡೂನ್ ಮತ್ತು ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ಮದರಸಾಗಳ ಸಂಖ್ಯೆ ಬೆಳೆಯುತ್ತಿದೆ. ಧಾರ್ಮಿಕ ಶಿಕ್ಷಣಕ್ಕಾಗಿ ಮಾತ್ರವಲ್ಲದೇ ಜನಸಂಖ್ಯಾ ಸಮತೋಲನವನ್ನು ಭಂಗಗೊಳಿಸುವ ವೇದಿಕೆಗಳಾಗಿಯೂ ಅಕ್ರಮ ಮದರಸಾಗಳನ್ನು ಬಳಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಈ ವರದಿಯನ್ನು ಆಧರಿಸಿ ಸಿಎಂ ಸೂಚನೆ ಮೇರೆಗೆ 52 ಮದರಸಾಗಳಿಗೆ ಬೀಗ ಹಾಕಲಾಗಿದೆ.