March 24, 2026
Tuesday, March 24, 2026
spot_img

ಇರಾನ್ ನಲ್ಲಿ ಯುದ್ಧದ ಕಾರ್ಮೋಡ: ಟೆಹ್ರಾನ್‌ನಿಂದ ಭಾರತೀಯ ವಿದ್ಯಾರ್ಥಿಗಳು ಕ್ವಾಮ್‌ಗೆ ಸ್ಥಳಾಂತರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ನ ಟೆಹ್ರಾನ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ 200ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು 140 ಕಿ.ಮೀ ದೂರದ ದಕ್ಷಿಣ ಇರಾನ್‌ನ ಸುರಕ್ಷಿತ ನಗರವಾದ ಕ್ವಾಮ್‌ಗೆ ಸ್ಥಳಾಂತರಿಸಲಾಗಿದೆ.

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿದ ಬಳಿಕ ಮುನ್ನಚ್ಛೇರಿಕೆಯಾಗಿ ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿದ್ಯಾರ್ಥಿಗಳನ್ನು ಐದು ಬಸ್‌ಗಳಲ್ಲಿ ಸ್ಥಳಾಂತರಿಸಲಾಯಿತು ಮತ್ತು ಇದೀಗ ಅವರು ಸುರಕ್ಷಿತವಾಗಿ ಕ್ವಾಮ್ ತಲುಪಿದ್ದಾರೆ.

ಟೆಹ್ರಾನ್‌ನಳ್ಳಿ ಹೆಚ್ಚು ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಕಲಿಯುತ್ತಿದ್ದು, ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ, ಶಾಹಿದ್ ಬೆಹೆಶ್ಟಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಟೆಹ್ರಾನ್‌ನ ಇರಾನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ.

ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ಪ್ರತಿನಿಧಿ ಡಾ. ಮೊಹಮ್ಮದ್ ಮೋಮಿನ್ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ಸ್ಥಳಾಂತರ ಕೆಲಸ ನಡೆಯುತ್ತಿದ್ದು, ಇರಾನ್‌ನ ಇತರ ಸ್ಥಳಗಳಲ್ಲಿರುವ ಇತರ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಯೋಜನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ನಾವು ಈಗ ಸುರಕ್ಷಿತವಾಗಿ ಕ್ವಾಮ್ ತಲುಪಿದ್ದೇವೆ ಎಂದು ಸ್ಥಳಾಂತರಿಸಲ್ಪಟ್ಟವರಲ್ಲಿ ಒಬ್ಬರಾದ ಎಂಜಿನಿಯರಿಂಗ್ ವಿದ್ಯಾರ್ಥಿ ಸೈಯದ್ ಫಾಜಿಲ್ TNIE ಗೆ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !